ಬಿಜೆಪಿ ಅಂದ್ರೆ ಬ್ರಿಟೀಷ್ ಜನತಾ ಪಾರ್ಟಿ: ಒಡೆದು ಆಳುವ ನೀತಿ ಅವರದ್ದು –ಸಚಿವ ಮಧು ಬಂಗಾರಪ್ಪ ಕಿಡಿ.

ಶಿವಮೊಗ್ಗ,ನವೆಂಬರ್,27,2023(www.justkannada.in): ಬಿಜೆಪಿಯವರು ಜೆಡಿಎಸ್ ಮುಗಿಸುತ್ತಾರೆ ಎಂಬ  ಶಾಸಕ ಹೆಚ್.ಸಿ ಬಾಲಕೃಷ್ಣ  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿ ಅಂದ್ರೆ ಬ್ರಿಟೀಷ್ ಜನತಾ ಪಾರ್ಟಿ.  ಒಡೆದು ಆಳುವ ನೀತಿ ಅವರದ್ದು ಎಂದು ಟೀಕಿಸಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದ್ದಾರೆ. ಹೆಚ್.ಡಿ ದೇವೇಗೌಡರು ಕೋಮುವಾದಿ ಬಿಜೆಪಿ ಜೊತೆ ಯಾಕೆ ಹೋದರು ಎಂಬದನ್ನ ಸ್ಪಷ್ಟಪಡಿಸಬೇಕು ಎಂದು ಹೇಳಿದರು. .

ಸೈನಿಕರ ವಿಚಾರದಲ್ಲಿ  ರಾಜಕೀಯಕ್ಕೆ ಬಳಸಬಾರದು . ನಾವೆಲ್ಲರೂ ಸುರಕ್ಷಿತವಾಗಿರಲು ರೈತರು ಸೈನಿಕರೇ ಕಾರಣ ಎಂದು ಸಚಿವ ಮಧು ಬಂಗಾರಪ್ಪ, ನಮ್ಮಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲ. ವಿದ್ಯುತ್ ಇಲ್ಲ ಅಂತಾ ಬಿಜೆಪಿಯವರು ಅಪಪ್ರಚಾರ ಮಾಡಿದರು. ಅಂತಹ  ಸಮಸ್ಯೆ ರಾಜ್ಯದಲ್ಲಿ ಇಲ್ಲ. ಖಜಾನೆಯಲ್ಲಿ ದುಡ್ಡಿದೆ. ವಿದ್ಯುತ್ ಇದೆ ಎಂದರು.

ವಿಪಕ್ಷ ನಾಯಕ ಆರ್. ಅಶೋಕ್  ಸರ್ಕಾರ ಪತನ ಅಂತಾರೆ . ಅಶೋಕ್ ಡಿಸಿಎಂ ಆಗಿದ್ದರು.  ಅವರಿಗೆ ಸರ್ಕಾರ ನಡೆಸಿದ  ಅನುಭವವಿದೆ. ವಿಪಕ್ಷನಾಯಕರು ಸರ್ಕಾರಕ್ಕೆ  ಸಲಹೆ ನೀಡಲಿ. ಅದುಬಿಟ್ಟು ಸರ್ಕಾರ ಬೀಳಿಸುವುದು ಅವರ ಕೆಲಸ ಅಲ್ಲ.  ಮನಸ್ಸಿಗೆ ಬಂದಂತೆ ಮಾತನಾಡುವುದು ಬಿಜೆಪಿ ಕೆಲಸ ಎಂದು ಗುಡುಗಿದರು.

Key words: BJP – British Janata Party-Minister- Madhu Bangarappa