ಏಕಾಏಕಿ ಕುಸಿದು ಬಿದ್ದ ಬಿಬಿಎಂಪಿ ನರ್ಸರಿ  ಶಾಲೆಯ ಕಟ್ಟಡ.

ಬೆಂಗಳೂರು,ನವೆಂಬರ್,27,2023(www.justkannada.in): ರಾಜ್ಯರಾಜಧಾನಿ  ಬೆಂಗಳೂರಿನಲ್ಲಿ ಬಿಬಿಎಂಪಿ ನರ್ಸರಿ  ಶಾಲೆಯ ಕಟ್ಟಡ ಕುಸಿದು ಬಿದ್ದಿದ್ದು ಭಾರಿ ಅನಾಹುತವೊಂದು ತಪ್ಪಿದೆ.

ಶಿವಾಜಿನಗರದ ಕುಕ್ಸ್ ರೋಡ್ ನ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆಯ ಕಟ್ಟಡ ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಕುಸಿದು ಬಿದ್ದಿದೆ  ಪರಿಣಾಮ ಕಟ್ಟಡ ಅವಶೇಷದಡಿ ವಾಹನಗಳು ಸಿಲುಕಿ ಸಂಪೂರ್ಣವಾಗಿ ಜಖಂ ಆಗಿವೆ. ಒಂದು ಗೂಡ್ಸ್ ಆಟೋ, ಒಂದು ಕಾರು, ಒಂದು ಬೈಕ್ ಜಖಂ ಆಗಿದೆ.

ಶಾಲೆಯಲ್ಲಿ 70ರಿಂದ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸದ್ಯ ಮಕ್ಕಳು ಶಾಲೆಯಲ್ಲಿ ಇಲ್ಲದ ವೇಳೆ ಅವಘಡ ಸಂಭವಿಸಿದ್ದು ಅಪಾಯದಿಂದ ಪಾರಾಗಿದ್ದಾರೆ.

ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ವೇಳೆ ಕಟ್ಟಡ ಬಿದ್ದಿದೆ. ಇದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಇದೀಗ ಸ್ಥಳಕ್ಕೆ ಜೆಸಿಬಿ ಆಗಮಿಸಿದ್ದು, ಕಟ್ಟಡದ ಅವಶೇಷಗಳನ್ನು ತೆರವು ಕಾರ್ಯ ನಡೆಯುತ್ತಿದೆ.

Key words: BBMP -nursery school- building- collapsed- suddenly