Tuesday, September 22, 2026

BDA Apartments

ಮಾದಪ್ಪನ ದರ್ಶನ ಪಡೆದ ರಾಘವೇಂದ್ರ ರಾಜ್’ಕುಮಾರ್ ಕುಟುಂಬ BDA JK_Adv BDA Adv
Home Cinema ಮಾದಪ್ಪನ ದರ್ಶನ ಪಡೆದ ರಾಘವೇಂದ್ರ ರಾಜ್’ಕುಮಾರ್ ಕುಟುಂಬ

ಮಾದಪ್ಪನ ದರ್ಶನ ಪಡೆದ ರಾಘವೇಂದ್ರ ರಾಜ್’ಕುಮಾರ್ ಕುಟುಂಬ

ಬೆಂಗಳೂರು, ಸೆಪ್ಟೆಂಬರ್ 02, 2023 (www.justkannada.in): ನಟ ಡಾ.ರಾಜಕುಮಾರ್ ಇಂದು ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ರಾಘವೇಂದ್ರ ರಾಜಕುಮಾರ್‍ ಕಿರಿಯ ಪುತ್ರ ಯುವ ರಾಜಕುಮಾರ್, ಪತ್ನಿ ಮಂಗಳಾ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.

ಅಂದಹಾಗೆ  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಸುಪ್ರಸಿದ್ಧ ದೇವಸ್ಥಾನಕ್ಕೆ ರಾಜ್ ಕುಟುಂಬ ಆಗಾಗ್ಗೆ ಭೇಟಿ ನೀಡುತ್ತಿರುತ್ತದೆ. ಈ ಬಾರಿ ರಾಘವೇಂದ್ರ ರಾಜಕುಮಾರ್‍ ಅವರು ಪತ್ನಿ-ಪುತ್ರನೊಂದಿಗೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ. ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ ಎಂದರು.