Thursday, August 6, 2026

BDA Apartments

Home Front Page ಪಕ್ಷ ಬಿಟ್ಟು ಹೋಗಿದ್ದ ಬಿಜೆಪಿ ಶಾಸಕರು ವಾಪಸ್ ಕಾಂಗ್ರೆಸ್ ಗೆ ಬರಬಹುದು- ಗೃಹ ಸಚಿವ ಡಾ...

ಪಕ್ಷ ಬಿಟ್ಟು ಹೋಗಿದ್ದ ಬಿಜೆಪಿ ಶಾಸಕರು ವಾಪಸ್ ಕಾಂಗ್ರೆಸ್ ಗೆ ಬರಬಹುದು- ಗೃಹ ಸಚಿವ ಡಾ ಜಿ.ಪರಮೇಶ್ವರ್.

ಬೆಂಗಳೂರು,ಆಗಸ್ಟ್,16,2023(www.justkannada.in): ಪಕ್ಷ ಬಿಟ್ಟು ಹೋಗಿದ್ದ ಬಿಜೆಪಿ ಶಾಸಕರು ವಾಪಸ್ ಕಾಂಗ್ರೆಸ್ ಗೆ ಬರಬಹುದು ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ವಾಪಸ್ ಬರಬಹುದು. ಬಿಜೆಪಿಯಲ್ಲಿ ಕೆಲವು ಶಾಸಕರಿಗೆ ಬೇಸರವಾಗಿದೆ. ಕಾಂಗ್ರೆಸ್ ಗೆ ಬರುವ ಶಾಸಕರನ್ನು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ.  ಪರಿಶೀಲನೆ ಮಾಡಿ ಪರಿಶೀಲಿಸುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ ಬರಬಹುದು ಎಂದರು.

ಕುಮಾರಸ್ವಾಮಿಯವರು ವಿರೋಧ ಪಕ್ಷದಲ್ಲಿದ್ದವರು. ಟೀಕೆ ಟಿಪ್ಪಣಿ ಮಾಡೋದಕ್ಕೆ ಅಭ್ಯಂತರವಿಲ್ಲ.  ಹೆಚ್.ಡಿಕೆ ಎರಡು ಬಾರಿ ಸಿಎಂ ಆಗಿದ್ದವರು. ಕುಮಾರಸ್ವಾಮಿ ಮಾತಾಡಿದ್ದನ್ನ ಜನ ಗಮನಿಸುತ್ತಿದ್ದಾರೆ.  ಆದ್ರೆ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಸರಿಯಲ್ಲ ಎಂದು ಪರಮೇಶ್ವರ್ ಕಿಡಿಕಾರಿದರು.

Key words: BJP- MLAs- come back – Congress – Home Minister- Dr. G. Parameshwar.