ಚಲುವರಾಯಸ್ವಾಮಿ ಗೆದ್ದಾಗಲೆಲ್ಲಾ ಅಧಿಕಾರ ಸಿಕ್ಕಿ ದುಡ್ಡು ಮಾಡ್ತಾನೆ- ಏಕವಚನದಲ್ಲೇ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ.

ಮಂಡ್ಯ,ಆಗಸ್ಟ್,16,2023(www.justkannada.in): ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುರೇಶ್ ಗೌಡ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಸುರೇಶ್ ಗೌಡ, ಸಚಿವ ಚಲುವರಾಯಸ್ವಾಮಿ  ಮಾಟ ಮಂತ್ರ ವಾಮಾಚಾರ ಮಾಡಿಸ್ತಾನೆ. ಚಲುವರಾಯಸ್ವಾಮಿ ಅದೃಷ್ಟ ಚೆನ್ನಾಗಿದೆ.  ಚಲುವರಾಯಸ್ವಾಮಿ ಗೆದ್ದಾಗಲೆಲ್ಲಾ ಅಧಿಕಾರ ಸಿಕ್ಕಿ ದುಡ್ಡು ಮಾಡುತ್ತಾನೆ.  ಮಾಟ ಮಂತ್ರ ವಾಮಾಚಾರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ ಎಂದು ಕಿಡಿಕಾರಿದರು.

ಚಲುವರಾಯಸ್ವಾಮಿ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ.  ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದ್ರೆ ಸುಮ್ಮನಿರಲ್ಲ. ಚಲುವರಾಯಸ್ವಾಮಿಯನ್ನ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರನ್ನಾಗಿ ಮಾಡಿದ್ದು ಜೆಡಿಎಸ್.  ಶಾಸಕ, ಸಚಿವ,  ಎಂಪಿ ಮಾಡಿದ್ದು ಜೆಡಿಎಸ್.  ಚಲುವರಾಯಸ್ವಾಮಿಗೆ ನಿಯತ್ತು ಇಲ್ಲ. ನನ್ನ ಚರಿತ್ರೆ ಬಗ್ಗೆ ಮಾತನಾಡ್ತಾನೆ . ಇವನ ಚರಿತ್ರೆ ಹಳಸಿಹೋಗಿದೆ ಎಂದು ಸುರೇಶ್ ಗೌಡ ಲೇವಡಿ ಮಾಡಿದರು.

Key words: Chaluvarayaswamy- wins-power mony- Former MLA-Suresh Gowda