Monday, September 21, 2026

BDA Apartments

ನಟ ಉಪೇಂದ್ರಗೆ ಪೊಲೀಸರಿಂದ ನೋಟಿಸ್ BDA JK_Adv BDA Adv
Home Cinema ನಟ ಉಪೇಂದ್ರಗೆ ಪೊಲೀಸರಿಂದ ನೋಟಿಸ್.

ನಟ ಉಪೇಂದ್ರಗೆ ಪೊಲೀಸರಿಂದ ನೋಟಿಸ್.

ಬೆಂಗಳೂರು,ಆಗಸ್ಟ್,14,2023(www.justkannada.in): ಅಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ನಟ ಉಪೇಂದ್ರಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ನೋಟಿಸ್ ನೀಡಿದ್ದಾರೆ.

ಇತ್ತೀಚೆಗೆ ಲೈವ್​ನಲ್ಲಿ ಮಾತನಾಡಿದ್ದ ನಟ ಉಪೇಂದ್ರ ಅವರು ಹೊಲಗೇರಿ ಎಂಬ ಶಬ್ದ ಬಳಕೆ ಮಾಡಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ತಪ್ಪಿನ ಅರಿವಾದ ಬಳಿಕ ಉಪೇಂದ್ರ ಕ್ಷಮೆ ಕೇಳಿದ್ದರು.

ಇದಾದ ಬಳಿ ನಟ ಉಪೇಂದ್ರ ವಿರುದ್ಧ ದೂರು ದಾಖಲಾಗಿದೆ. ಆಕ್ಷೇಪಾರ್ಹ ಪದ ಬಳಕೆ ಪ್ರಕರಣದಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರಿಂದ ನಟ ಉಪೇಂದ್ರಗೆ ನೋಟಿಸ್ ಜಾರಿ ಮಾಡಲಾಗಿದೆ.

ನಟ ಉಪೇಂದ್ರ ಅವರ ಕತ್ರಿಗುಪ್ಪೆ ಮತ್ತು ಸದಾಶಿವನಗರ ಮನೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರಕರಣ ಸಂಬಂಧ ಸ್ಥಳ‌ ಮಹಜರು ನಡೆಯಲಿದೆ ಎಂದು ಹೇಳಲಾಗುತ್ತಿದೆ.

Key words: use -objectionable –words- Notice – police – actor -Upendra.