Monday, September 14, 2026

BDA Apartments

ಇಂದು ಭಾರತ-ವೆಸ್ಟ್ ಇಂಡೀಸ್ 2ನೇ ಟಿ-20 ಪಂದ್ಯ BDA JK_Adv BDA Adv
Home Front Page ಇಂದು ಭಾರತ-ವೆಸ್ಟ್ ಇಂಡೀಸ್ 2ನೇ ಟಿ-20 ಪಂದ್ಯ

ಇಂದು ಭಾರತ-ವೆಸ್ಟ್ ಇಂಡೀಸ್ 2ನೇ ಟಿ-20 ಪಂದ್ಯ

ಬೆಂಗಳೂರು, ಆಗಸ್ಟ್ 06, 2023 (www.justkannada.in): ಟೀಮ್‌ ಇಂಡಿಯಾ ಇಂದು ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಟಿ-20 ಪಂದ್ಯವನ್ನು ಆಡಲಿದೆ.

ಮೊದಲ ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾ ಆಟಗಾರರು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ವಿಂಡೀಸ್‌ ಗೆಲುವಿನ ಉಮೇದಿನಲ್ಲಿದ್ದು, ದ್ವಿತೀಯ ಪಂದ್ಯಕ್ಕೂ ಇದನ್ನು ವಿಸ್ತರಿಸುವ ಯೋಜನೆಯಲ್ಲಿದೆ.

ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀ ಸನ್ನು 149ಕ್ಕೆ ಹಿಡಿದು ನಿಲ್ಲಿಸಿದಾಗ ಭಾರತ ಗೆಲ್ಲಬಹುದೆಂದೇ ಭಾವಿಸಲಾಗಿತ್ತು. ಆದರೆ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೈಕೊಟ್ಟಿತ್ತು.

ಇಶಾನ್‌ ಕಿಶನ್‌, ಶುಭಮನ್‌ ಗಿಲ್‌, ಸಂಜು ಸ್ಯಾಮ್ಸನ್‌ ಕ್ರೀಸ್‌ ಆಕ್ರಮಿಸಿಕೊಳ್ಳುವ ತುರ್ತು ಅಗತ್ಯವಿದೆ. ಇಲ್ಲದಿದ್ದರೆ 2ನೇ ಪಂದ್ಯದಲ್ಲೂ ಸೋಲಿನ ರುಚಿ ನೋಡಬೇಕಾಗುತ್ತದೆ.