ಬ್ರಿಟನ್ ಗೆ ಕೊರೋನಾ ಮತ್ತೆ ಲಗ್ಗೆ!: ಒಮೈಕ್ರಾನ್ ರೂಪಾಂತರ ತಳಿ ತಂದ ಆತಂಕ

ಬೆಂಗಳೂರು, ಆಗಸ್ಟ್ 06, 2023 (www.justkannada.in): ಬ್ರಿಟನ್ ಗೆ ಕೊರೋನಾ ಮತ್ತೆ ಲಗ್ಗೆ ಇಟ್ಟಿದ್ದು, ಅತ್ಯಂತ ವೇಗವಾಗಿ ಹರಡುತ್ತಿದ್ದ ಒಮೈಕ್ರಾನ್​ನಿಂದ ರೂಪಾಂತರಗೊಂಡಿರುವ ತಳಿ ಆತಂಕ ಸೃಷ್ಟಿಸಿದೆ.

ಹೊಸ ರೂಪಾಂತಕ್ಕೆ ಇಜಿ .5.1 ಎಂದು ಕರೆಯಲಾಗುತ್ತಿದ್ದು . ಇದೀಗ ಮತ್ತೆ ಆತಂಕ ಹುಟ್ಟಿಸಿದೆ. ಎರಿಸ್ ಎಂದು ಕರೆಯುವ ಈ ಇಜಿ.5.1 ಅನ್ನು ಕಳೆದ ತಿಂಗಳು ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು.

ಬ್ರಿಟನ್​ನಲ್ಲಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗುವ ಏಳು ರೋಗಿಗಳಲ್ಲಿ ಒಬ್ಬರಲ್ಲಿ ಇಜಿ .5.1  ಕಾಣಿಸಿಕೊಳ್ಳುತ್ತಿದೆ ಎಂದು ಯುಕೆ ಆರೋಗ್ಯ ಭದ್ರತಾ ಸಂಸ್ಥೆ ತಿಳಿಸಿದೆ.

ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯನ್ನು ನೋಡುತ್ತಿದ್ದೇವೆ. ವಯಸ್ಸಾದವರು ಆಸ್ಪತ್ರೆ ಸೇರುವ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡಿದ್ದೇವೆ. ಆದರೂ ಗಂಭೀರ ಸ್ಥಿತಿ ಮುಟ್ಟಿಲ್ಲ. ರೋಗಿಗಳು ಐಸಿಯು ಸೇರುವ ಪ್ರಕರಣಗೂ ಕಂಡು ಬಂದಿಲ್ಲ ಎಂದು ಸ್ಥಳೀಯ ಅಧಿಕಾರಿಗಳ ತಿಳಿಸಿದ್ದಾರೆ.