ರಾಹುಲ್ ಗಾಂಧಿ ಸಂಸತ್ ಸದಸ್ಯತ್ವದ ಮರು ಸ್ಥಾಪನೆಗೆ ವಿಳಂಬ: ಮೋದಿ, ಸ್ಪೀಕರ್ ವಿರುದ್ಧ ಕೈ ನಾಯಕರ ಆಕ್ರೋಶ

ಬೆಂಗಳೂರು, ಆಗಸ್ಟ್ 06, 2023 (www.justkannada.in): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವದ ಮರು ಸ್ಥಾಪನೆಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಖಂಡಿಸಿ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಸಭೆಯಲ್ಲಿ ರಾಹುಲ್‌ ಪಾಲ್ಗೊಳ್ಳುತ್ತಾರೆ ಎಂಬ ಭಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಡುತ್ತಿದೆ. ಹೀಗಾಗಿ ಸಂಸತ್‌ ಸದಸ್ಯತ್ವದ ಮರು ಸ್ಥಾಪನೆಗೆ ಸ್ಪೀಕರ್ ಮೂಲಕ ವಿಳಂಬ ಮಾಡಿಸಲಾಗುತ್ತಿದೆ ಎಂದು ಕೈ ನಾಯಕರು ಕಿರಿಕಾರಿದ್ದಾರೆ.

ವಿಚಾರಣಾ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ 26 ಗಂಟೆಗಳ ಒಳಗೆ ರಾಹುಲ್‌ ಅವರ ಸಂಸತ್‌ ಸದಸ್ಯತ್ವವನ್ನು ಸ್ಪೀಕರ್‌ ಅನರ್ಹಗೊಳಿಸಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿ ಅಷ್ಟೇ ಸಮಯ ಉರುಳಿ ಹೋಗಿದೆ. ಆದರೀಗ ವಿಳಂಬ ಧೋರಣೆ ತಳೆದಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಅವರನ್ನು ಅನರ್ಹಗೊಳಿಸುವಾಗ ತಳೆದ ವೇಗವನ್ನೇ ಸದಸ್ಯತ್ವ ಮರುಸ್ಥಾಪನೆಯಲ್ಲೂ ಅನುಸರಿಸಬೇಕು. ಆದಷ್ಟು ಬೇಗ ಅವರು ಲೋಕಸಭೆಗೆ ಮರಳಬೇಕಿದೆ ಎಂದು ಕೈ ನಾಯಕರು ಹೇಳಿದ್ದಾರೆ.