Tuesday, September 22, 2026

BDA Apartments

ಪ್ರೀತಿಗೆ ಯುವತಿ ಮನೆಯಿಂದ ನಿರಾಕರಣೆ: ಯುವಕ ನೇಣಿಗೆ ಶರಣು BDA JK_Adv BDA Adv
Home Crime ಪ್ರೀತಿಗೆ ಯುವತಿ ಮನೆಯಿಂದ ನಿರಾಕರಣೆ: ಯುವಕ ನೇಣಿಗೆ ಶರಣು..

ಪ್ರೀತಿಗೆ ಯುವತಿ ಮನೆಯಿಂದ ನಿರಾಕರಣೆ: ಯುವಕ ನೇಣಿಗೆ ಶರಣು..

ಮೈಸೂರು,ಜುಲೈ,28,2023(www.justkannada.in): ಪ್ರೀತಿಗೆ ಯುವತಿಯ ಮನೆಯವರು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೇಶವ್ (29) ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ ಎರಡು ತಿಂಗಳಿಂದ ಮೈಸೂರಿನ ಸರಸ್ವತಿ ಪುರಂನ ಬಾಡಿಗೆ ಮನೆಯಲ್ಲಿ ಕೇಶವ್ ವಾಸವಿದ್ದು, ರೈಲ್ವೆ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಿದ್ದ.

ದಾವಣಗೆರೆ ಮೂಲದ ಕೇಶವ್ ಹಲವು ವರ್ಷಗಳಿಂದ ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದ. ಆದರೆ ಯುವತಿಯ ಮನೆಯವರು ಕೇಶವ್ ಪ್ರೀತಿಯನ್ನು ನಿರಾಕರಿಸಿದ್ದರು. ಹೀಗಾಗಿ ಮನನೊಂದು ಕೇಶವ್  ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದು, ಈ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Rejection – love-boy- hanging-mysore