ಮೈಸೂರಿನಲ್ಲಿ ಕಾರು ಅಪಘಾತ ಪ್ರಕರಣಕ್ಕೆ ಟ್ವಿಸ್ಟ್.

ಮೈಸೂರು,ಜುಲೈ,28,2023(www.justkannada.in): ನಿನ್ನೆ ಮೈಸೂರಿನಲ್ಲಿ ನಡೆದಿದ್ದ ಕಾರು ಅಪಘಾತ ಪ್ರಕರಣಕ್ಕೆ ಟ್ಚಿಸ್ಟ್ ಸಿಕ್ಕಿದೆ. ಹೌದು ಕಾರು ಅಪಘಾತದಿಂದ ಯಾರೂ ಸಾವನಪ್ಪಿಲ್ಲ. ಬದಲಾಗಿ ಸಹಾಯ ಮಾಡಲು ಬಂದ ಇಬ್ಬರು ಸಹ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ತಡರಾತ್ರಿ ಮೈಸೂರಿನ ಮಾನಂದವಾಡಿಯ ರಸ್ತೆಯ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ  ಕಾರು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಡ್ರೈವರ್ ಕಿರಣ್  ಹಾಗೂ ಸಹಾಯಕ್ಕೆ ಬಂದ ಆಟೋ ಚಾಲಕ ರವಿ ವಿದ್ಯುತ್  ಶಾಕ್ ನಿಂದ ಸಾವನ್ನಪ್ಪಿದ್ದರು ಎನ್ನಲಾಗಿತ್ತು.

ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಸಹೋದರಿಯ ಮಗ ದೀರಜ್ ಪ್ರಸಾದ್​ಗೆ ಸೇರಿದ ಕಾರು ಅಪಘಾತವಾಗಿತ್ತು.ಬಳಿಕ ಅಪಘಾತವಾದ ಸ್ಥಳದಿಂದ ಕಾರನ್ನು ತಳ್ಳಲು ಕಾರಿನಲ್ಲಿದ್ದ ನಾಲ್ವರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದ ಆಟೋ ಚಾಲಕ ರವಿನನ್ನು ಸಹಾಯಕ್ಕೆ ಬರುವಂತೆ ಕರೆದಿದ್ದಾರೆ. ಅದರಂತೆ ರವಿ ನೆರವಿಗೆ ಧಾವಿಸಿದ್ದು, ಎಲ್ಲರೂ ಸೇರಿ ತಳ್ಳುವಾಗ ಕಾರಿನಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಕಿರಣ್​ ಹಾಗೂ ಸಹಾಯಕ್ಕೆ ಬಂದಿದ್ದ ಆಟೋ ಚಾಲಕ ರವಿ ಸಾವನ್ನಪ್ಪಿದ್ದಾರೆ. ಕಿರಣ್ ಹಾಗೂ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮತ್ತೊಬ್ಬ ವ್ಯಕ್ತಿ ಕೂಡ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಇವರೆಲ್ಲ ಕಡು ಬಡತನದಲ್ಲಿ ಇರುವವರು. ಕೆಪಿಟಿಸಿಎಲ್‌ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಮೃತರ ಸಂಬಂಧಿಕರು ಒತ್ತಾಯ ಮಾಡಿದ್ದಾರೆ.

Key words: twist – car –accident- case – Mysore.