Thursday, August 6, 2026

BDA Apartments

Home Front Page ಹಾವೇರಿ ಜಿಲ್ಲೆ ಹಿಂದುಳಿದಿದೆ ಎಂದಿದ್ದ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು.

ಹಾವೇರಿ ಜಿಲ್ಲೆ ಹಿಂದುಳಿದಿದೆ ಎಂದಿದ್ದ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು.

ಹಾವೇರಿ,ಜುಲೈ,28,2023(www.justkannada.in): ಹಾವೇರಿ ಜಿಲ್ಲೆ  ಹಿಂದುಳಿದಿದೆ ಎಂದು ಹೇಳಿದ್ದ ಸಿಎಂ ಸಿದ್ಧರಾಮಯ್ಯಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ,  ಮೊನ್ನೆ ಸಿಎಂ ಸಿದ್ಧರಾಮಯ್ಯ ಹಾವೇರಿಗೆ ಬಂದು ಜಿಲ್ಲೆ ಹಿಂದುಳಿದಿದೆ ಎಂದಿದ್ದಾರೆ. ಜಿಲ್ಲಾವಾರು ಅಭಿವೃದ್ದಿ ಸೂಚ್ಯಾಂಕವನ್ನ ಐದು ವರ್ಷಕ್ಕೊಮ್ಮೆ ಪ್ರಕಟಿಸುತ್ತಾರೆ. ನಾನು ಸಿಎಂ ಆಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನ ಮಾಡಿದ್ದೇನೆ ’ಹಾವೇರಿ ಜಿಲ್ಲೆಯಲ್ಲಿ ಶಿಕ್ಷಣ , ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ.  2014ರಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು.  ಆದರೆ ಅದನ್ನ ಬೇರೆ ಕಡೆಗೆ ಸ್ಥಳಾಂತರ  ಮಾಡಿದ್ದು ಸಿದ್ಧರಾಮಯ್ಯ ಎಂದು ಟಾಂಗ್ ನೀಡಿದರು.

ಜೂನ್ ತಿಂಗಳಲ್ಲಿ ಮಳೆಯಾಗದೇ ಬೆಳೆಹಾನಿಯಾಗಿತ್ತು. ಜುಲೈ ತಿಂಗಳಲ್ಲಿ ಅತಿಹೆಚ್ಚು ಮಳೆಯಾಗಿ ಬೆಳೆಹಾನಿಯಾಗಿದೆ. ಸರ್ಕಾರ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು. ಸಚಿವರು ಜಿಲ್ಲಾ ಕೇಂದ್ರಗಳೀಗೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

Key words: Former CM –Basavaraj Bommai – CM Siddaramaiah – Haveri district -backward.