Thursday, August 6, 2026

BDA Apartments

Home Crime ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಸಹಾಯ ಮಾಡಲು ಬಂದ ಓರ್ವ ಸೇರಿ ಇಬ್ಬರು ಸಾವು.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಸಹಾಯ ಮಾಡಲು ಬಂದ ಓರ್ವ ಸೇರಿ ಇಬ್ಬರು ಸಾವು.

ಮೈಸೂರು,ಜುಲೈ,28,2023(www.justkannada.in): ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸಂಭವಿಸಿದ ಅಪಘಾತದ ವೇಳೆ ಸಹಾಯಕ್ಕೆ ಬಂದ ಓರ್ವ ವ್ಯಕ್ತಿ ಸೇರಿ ಇಬ್ಬರು ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಮಾನಂದವಾಡಿಯ ರಸ್ತೆಯ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ಈ ಘಟನೆ ನಡೆದಿದೆ. ಕಾರು ಚಲಾಯಿಸುತ್ತಿದ್ದ ಡ್ರೈವರ್ ಕಿರಣ್, ಹಾಗೂ ಸಹಾಯಕ್ಕೆ ಬಂದ ಆಟೋ ಚಾಲಕ ರವಿ ಸಾವನ್ನಪ್ಪಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಸಂಸದ ಶ್ರೀನಿವಾಸ ಪ್ರಸಾದ್ ಸಹೋದರಿ ಮಗ ಧೀರಜ್ ಪ್ರಸಾದ್ ಗೆ ಸೇರಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ.  ಡ್ರೈವರ್ ಕಿರಣ್ ಹಾಗೂ ಸಹಾಯಕ್ಕೆ ಬಂದ ಆಟೋ ಚಾಲಕ ರವಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ದೀರಜ್ ಪ್ರಸಾದ್ ಮನೆಯಲ್ಲಿ ಕಾರು ಪಾರ್ಕ್ ಮಾಡುವಂತೆ ಚಾಲಕನಿಗೆ ತಿಳಿಸಿದ್ದರು. ಆದರೆ ಚಾಲಕ ಸ್ನೇಹಿತನ ಜೊತೆ ಕಾರಿನಲ್ಲಿ ಸುತ್ತಾಟ ನಡೆಸಿದ್ದಾನೆ. ಈ ವೇಳೆ ಕಾರು ರಸ್ತೆ ಅಫಘಾತವಾಗಿದೆ. ಘಟನೆ ನಡೆದ ಸಮಯದಲ್ಲಿ ಅಫಘಾತವಾಗಿದ್ದ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ರವಿ ಕಾರಿನಲ್ಲಿದ್ದವರನ್ನು ರಕ್ಷಿಸುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Key words: Car -collides – electric pole-Two -dead-mysore