Tuesday, September 22, 2026

BDA Apartments

ಸಚಿವ ಹೆಚ್.ಸಿ ಮಹದೇವಪ್ಪ ಭೇಟಿಯಾಗಿ ಚರ್ಚಿಸಿದ ಹಿರಿಯ ಸಾಹಿತಿ ದೇವನೂರು ಮಹಾದ...
Home Front Page ಸಚಿವ ಹೆಚ್.ಸಿ ಮಹದೇವಪ್ಪ ಭೇಟಿಯಾಗಿ ಚರ್ಚಿಸಿದ ಹಿರಿಯ ಸಾಹಿತಿ ದೇವನೂರು ಮಹಾದೇವ.

ಸಚಿವ ಹೆಚ್.ಸಿ ಮಹದೇವಪ್ಪ ಭೇಟಿಯಾಗಿ ಚರ್ಚಿಸಿದ ಹಿರಿಯ ಸಾಹಿತಿ ದೇವನೂರು ಮಹಾದೇವ.

ಮೈಸೂರು,ಜುಲೈ,17,2023(www.justkannada.in):  ಹಿರಿಯ ಸಾಹಿತಿ ದೇವನೂರು ಮಹಾದೇವ  ಅವರು ಸಚಿವ ಡಾ ಹೆಚ್. ಸಿ ಮಹದೇವಪ್ಪ ಅವರನ್ನ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಡಾ ಹೆಚ್ ಸಿ ಮಹಾದೇವಪ್ಪ ಅವರ ನಿವಾಸದಲ್ಲಿ ಸಾಹಿತಿ ದೇವನೂರು ಮಹದೇವ ಅವರು ಭೇಟಿಯಾಗಿ ಕೆಲ ಪ್ರಮುಖ ವಿಚಾರಗಳ ಚರ್ಚೆ ನಡೆಸಿದರು.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಮಾಹಿತಿ ಹಂಚಿಕೊಂಡಿದ್ದು, ದೇವನೂರು ಮಹದೇವ ಕನ್ನಡದ ಸಾಕ್ಷಿ ಪ್ರಜ್ಞೆ. ಅವರೊಂದಿಗೆ ಪ್ರಮುಖ ವಿಚಾರಗಳ ಚರ್ಚೆ ಆಗಿದೆ. ಸಾಮಾಜಿಕ ನ್ಯಾಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ ಎಂದಿದ್ದಾರೆ. ಭೇಟಿ ವೇಳೆ ದಲಿತ ಸಂಘಟನೆಗಳ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: Minister- HC Mahadevappa -met – Devanur Mahadev- discussed