Tuesday, September 22, 2026

BDA Apartments

Home Front Page ಸರ್ವಾಧಿಕಾರಿ, ಕೋಮುವಾದ, ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟಕ್ಕಾಗಿ ಒಗ್ಗಟ್ಟು- ಸಿಎಂ ಸಿದ‍್ಧರಾಮಯ್ಯ ಟ್ವೀಟ್..

ಸರ್ವಾಧಿಕಾರಿ, ಕೋಮುವಾದ, ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟಕ್ಕಾಗಿ ಒಗ್ಗಟ್ಟು- ಸಿಎಂ ಸಿದ‍್ಧರಾಮಯ್ಯ ಟ್ವೀಟ್..

ಬೆಂಗಳೂರು,ಜುಲೈ,17,2023(www.justkannada.in):  ಇಂದು ಮತ್ತು ನಾಳೆ ವಿಪಕ್ಷ ನಾಯಕರ ಮಹಾಮೈತ್ರಿಕೂಟ ಸಭೆ ಕುರಿತು ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸರ್ವಾಧಿಕಾರಿ, ಕೋಮುವಾದಿ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ದದ ಹೋರಾಟದಲ್ಲಿ ಒಂದಾಗಲು ಆಗಮಿಸುತ್ತಿರುವ ದೇಶದ ಪ್ರಮುಖ ವಿರೋಧಪಕ್ಷಗಳ ನಾಯಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕೂಡು ಬದುಕಿನ ದೀರ್ಘ ಪರಂಪರೆ ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬಿತ್ತಿದ ಬೀಜ, ಬೆಳೆದು ಫಲ ನೀಡಲಿ ಎನ್ನುವುದು ಕನ್ನಡಿಗರೆಲ್ಲರ ಒಕ್ಕೊರಲಿನ ಹಾರೈಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ಟರ್ ನಲ್ಲಿ ಶುಭಕೋರಿದ್ದಾರೆ.

ಇಂದು ಸಂಜೆ ಮಹಾಮೈತ್ರಿಕೂಟದ ನಾಯಕರಿಗೆ ಸಿಎಂ ಸಿದ್ಧರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗಿದೆ.

Key words: Unity – fight- against- dictatorial-communal-corrupt- government- CM siddaramaiah