Friday, August 7, 2026

BDA Apartments

Home Front Page ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ಕಾರ್ಯಕರ್ತರ ಹತ್ಯೆ ಶುರು-ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ಕಾರ್ಯಕರ್ತರ ಹತ್ಯೆ ಶುರು-ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ.

ಮೈಸೂರು,ಜುಲೈ,12,2023(www.justkannada.in): ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ಕಾರ್ಯಕರ್ತರ ಹತ್ಯೆ ಶುರುವಾಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನನ್ನು ಗಂಟು ಮೂಟೆ ಕಟ್ಟಿ ಬಿಸಾಕಲಾಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು,  ರಾಜ್ಯದ  ಎಲ್ಲಾ ಕಡೆಗಳಲ್ಲೂ ಕೊಲೆ, ಹತ್ಯೆ, ದೌರ್ಜನ್ಯ ನಡೆಯುತ್ತಿವೆ. ಸಿಎಂ ಕ್ಷೇತ್ರದಲ್ಲೇ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ ಅಂದ ಮೇಲೆ ರಾಜ್ಯದ ಬೇರೆ ಭಾಗಗಳ ಪರಿಸ್ಥಿತಿ ಹೇಗಿರಬೇಡ ಯೋಚಿಸಿ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ, ಹಿರಿಯ ನಾಗರೀಕರಿಗೆ ರಕ್ಷಣೆ ಇಲ್ಲ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ರಾಜ್ಯದ ಒಳಗಿ‌ನ ಜಿಹಾದಿ ಮನಃಸ್ಥಿತಿ ಇರೋ ಜನ ಎದ್ದು ಕೂರುತ್ತಾರೆ. ಹೀಗಾಗಿ ಕೊಲೆಗಳು ನಡೆಯುತ್ತವೆ ಎಂದು ಕಿಡಿಕಾರಿದರು.

ವೇಣುಗೋಪಾಲ ನಾಯಕ ಕೊಲೆ ಪೂರ್ವ ನಿಯೋಜಿತ ಕೊಲೆ. ಜಿಹಾದಿ ಮನಃಸ್ಥಿತಿ ಜನ ಪ್ಲಾನ್ ಮಾಡಿಕೊಂಡು ಹಿಂದೂಗಳ ಕೊಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಈ ಕೊಲೆಗಳ ವಿಚಾರದಲ್ಲಿ ಗಂಭೀರತೆ ಇಲ್ಲ. ಕಾಂಗ್ರೆಸ್ ನವರಿಗೆ ಅಧಿಕಾರದ ಅಹಂ ಜಾಸ್ತಿಯಾಗಿದೆ.  ಸುಳ್ಳಿನ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದವರು ವೈಯಕ್ತಿಕ ವರ್ಚಸ್ಸಿನಿಂದ ಬಂದ ರೀತಿ ಮಾತಾನಾಡುತ್ತಿದ್ದಾರೆ. ವೇಣುಗೋಪಾಲ ನಾಯಕ ಹತ್ಯೆ ನಂತರ ಅವರ ಕುಟುಂಬಕ್ಕೆ ಸ್ಪಂದಿಸುವ ಕೆಲಸವನ್ನು ಜಿಲ್ಲಾ ಮಂತ್ರಿ  ಮಾಡಿಲ್ಲ. ಸಿಎಂ ಸಮೇತ ಎಲ್ಲರು ಕಣ್ಮುಂಚಿ ಕುಳಿತಿದ್ದಾರೆ. ಹಿಂದೂ ಕಾರ್ಯಕರ್ತರು ಮೇಲೆ ಈ ರೀತಿ ಘಟನಾವಳಿಗಳು ಮೇಲಿಂದ ಮೇಲೆ ನಡೆಯುತ್ತವೆ.  ಎಲ್ಲರೂ ಸ್ವಲ್ಪ ಜಾಗರೂಕರಾಗಿರಿ. ಶವದ ಮೇಲೆ ಬಿಜೆಪಿ ಯಾವತ್ತೂ ರಾಜಕೀಯ ಮಾಡಿಲ್ಲ. ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಯಾದಾಗ ಅವರ ವಿರುದ್ದ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿ. ಪೋಲಿಸ್ ತನಿಖೆಗೆ ಒತ್ತಡಗಳು ಉಂಟಾಗುವ ಅನುಮಾನ ನಮಗೆ ಇದೆ. ಅದ್ದರಿಂದ ಸಿಬಿಐ ತನಿಖೆ ಮಾಡಿದರೆ ಸತ್ಯ ಹೊರಬರುತ್ತದೆ ಎಂದು ಶ್ರೀರಾಮುಲು ಹೇಳಿದರು.

ಜೈನ ಮುನಿ ಕೊಲೆ ಸಿಬಿಐಗೆ ನೀಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ನಮ್ಮ ಪೋಲಿಸರು ಸಮರ್ಥರಿದ್ದಾರೆ. ಆದರೆ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ಆ ಕಾರಣಕ್ಕೆ‌ ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ವಹಿಸಬೇಕು. ವೇಣುಗೋಪಾಲ್‌ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 40 ಕೊಲೆಗಳಾಗಿವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. 2013ರಲ್ಲೂ ಇದೇ ರೀತಿ ಪರಿಸ್ಥಿತಿ ಇತ್ತು.ಬೆಂಗಳೂರಿನ ಕೊಲೆ ಸಹ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ ಎಂದು ನುಡಿದರು.

Key words: Congress – power-killing – Hindu workers -former-minister Sriramulu