ಹಿಂದುತ್ವ ಹತ್ತಿಕ್ಕುವುದು ಕೂಡ ಕಾಂಗ್ರೆಸ್ ಪ‍ಕ್ಷದ ಒಂದು ಅಜೆಂಡಾ- ಮಾಜಿ ಸಚಿವ ಸುನೀಲ್ ಕುಮಾರ್.

ಬೆಂಗಳೂರು,ಜುಲೈ,12,2023(www.justkannada.in): ಹಿಂದುತ್ವ ಹತ್ತಿಕ್ಕುವುದು ಕೂಡ ಕಾಂಗ್ರೆಸ್ ಪ‍ಕ್ಷದ ಒಂದು ಅಜೆಂಡಾ ಆಗಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸುನೀಲ್ ಕುಮಾರ್,  ಕಾಂಗ್ರೆಸ್ ಸರ್ಕಾರ ಮೊಂಡವಾ ಪ್ರತಿಷ್ಟೆ ಬಿಡಿಬೇಕು. ಜೈನಮುನಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕು ಅಂದರೆ ಸಿಬಿಐ ತನಿಖೆಗೆ ನೀಡಿ ಎಂದು ಆಗ್ರಹಿಸಿದರು.

ಕಳೆದ  2 ತಿಂಗಳಲ್ಲಿ ಹಿಂದುತ್ವ ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ.   ನಮ್ಮ ಸಿದ್ದಾಂತ ಬೆಂಬಲಿಸುವವರ ಮೇಲೆ ಹಲ್ಲೆ ಮತ್ತು ಹತ್ಯೆಯಾಗುತ್ತಿದೆ.  ಈ ಹಿಂದೆ ಸಿದ್ಧರಾಮಯ್ಯ ಅವಧಿಯಲ್ಲಿ 18 ಹಿಂದೂಗಳ ಹತ್ಯೆ ಆಗಿದೆ. ಈಗ ಮತ್ತೆ ಅದೇ ವಾತಾವರಣ ಸೃಷ್ಠಿಯಾಗಿದೆ. ಹಿಂದುತ್ವ ಹತ್ತಿಕ್ಕುವುದು ಕೂಡ ಕಾಂಗ್ರೆಸ್ ಪಕ್ಷದ ಒಂದು ಅಜೆಂಡಾ ಎಂದು ಸುನೀಲ್ ಕುಮಾರ್ ಕಿಡಿಕಾರಿದರು.

Key words:  Suppression – Hindutva – agenda – Congress -Former minister- Sunil Kumar.