Wednesday, August 5, 2026

BDA Apartments

Home Front Page ಮೋದಿ ಎಲ್ಲೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ- ಕಾಂಗ್ರೆಸ್ ಗೆ ನಳೀನ್...

ಮೋದಿ ಎಲ್ಲೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ- ಕಾಂಗ್ರೆಸ್ ಗೆ ನಳೀನ್ ಕುಮಾರ್ ಕಟೀಲ್ ಟಾಂಗ್

ಮಂಗಳೂರು,ಜೂನ್,1,2023(www.justkannada.in):  ಕಾಂಗ್ರೆಸ್ ಸುಳ್ಳುಗಾರರು ಮೋಸಗಾರರ ಪಾರ್ಟಿ. ಪ್ರಧಾನಿ ಮೋದಿ ಎಲ್ಲೂ 15 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್,  ಚುನಾವಣೆ ವೇಳೆ ಕಾಂಗ್ರೆಸ್​​ನವರು ಗ್ಯಾರಂಟಿ ಘೋಷನೆ ಮಾಡಿದ್ದರು. ಅಧಿಕಾರಕ್ಕೆ ಬಂದು 20 ದಿನಗಳಾದರೂ ಗ್ಯಾರಂಟಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿ ಮಾಡಿದೆ, ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.

ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ, ಬಸ್​​ಗಳಲ್ಲಿ ಟಿಕೆಟ್ ಪಡೆಯುತ್ತಿಲ್ಲ. ಅಡ್ಡ ದಾರಿಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿದೆ. ಕಪ್ಪು ಹಣ ತಂದರೆ 15 ಲಕ್ಷ ರೂ. ಕೊಡ್ತೇವೆ ಅಂತಷ್ಟೇ  ಪ್ರಧಾನಿ ಮೋದಿ ಹೇಳಿದ್ದಾರೆ. ಮೋದಿ ಎಲ್ಲೂ 5 ಲಕ್ಷ ರೂ. ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಗ್ಯಾರಂಟಿ ಜಾರಿ ಮಾಡದಿದ್ರೆ  ಬಿಜೆಪಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

Key words: Modi -Rs 15 lakh- Guarantee card –not- given – Naleen Kumar Kateel