ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮ. ಹರೀಶ್ ನೇತೃತ್ವದಲ್ಲಿ ಸಿಎಂ ಸಿದ್ಧರಾಮಯ್ಯ ಭೇಟಿ, ಮನವಿ ಸಲ್ಲಿಕೆ.

ಬೆಂಗಳೂರು,ಜೂನ್,1,2023(www.justkannada.in):  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಮುಖರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ  ಕೆಲವು ಮನವಿಗಳನ್ನ ಮುಂದಿಟ್ಟರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಅವರ ನೇತೃತ್ವದಲ್ಲಿ  ಸಿಎಂ ಸಿದ‍್ಧರಾಮಯ್ಯರನ್ನ ಭೇಟಿಯಾಗಿ ಮನವಿ ಸಲ್ಲಿಸಿತು.  ಬಳಿಕ ಮಾತನಾಡಿದ   ಭಾ,ಮ ಹರೀಶ್, ಮುಖ್ಯಮಂತ್ರಿಗಳನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದ್ದೇವೆ. ವಾಣಿಜ್ಯ ಮಂಡಳಿಯಿಂದ ಸಮಸ್ಯೆಗಳ ಬಗ್ಗೆ ಮನವಿ ಕೊಟ್ಟಿದ್ದೇವೆ. ಚಿತ್ರರಂಗದ ಧ್ಯೇಯೋದ್ದೇಶದ ಬಗ್ಗೆಯೂ ಸಿಎಂ ಮುಂದೆ ಪ್ರಸ್ತಾಪ ಮಾಡಿದ್ದೇವೆ. ಸಬ್ಸಿಡಿ ವಿಚಾರ ಸದ್ಯಕ್ಕೆ ಚರ್ಚೆ ಮಾಡಿಲ್ಲ. ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಆಯ್ಕೆ ಸಂಬಂಧ ಚರ್ಚಿಸಿದ್ದೇವೆ. ಕಂಠೀರವ ಸ್ಟುಡಿಯೋ ಅಧ್ಯಕ್ಷರ ಆಯ್ಕೆ ಬಗ್ಗೆಯೂ ಸಮಾಲೋಚನೆ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

‘ಸೆನ್ಸಾರ್ ಮಂಡಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಭಾ.ಮ. ಹರೀಶ್, ಸೆನ್ಸಾರ್ ಮಂಡಳಿ ವಿಚಾರದಲ್ಲಿ ಗೊಂದಲಗಳಿವೆ. ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈ ಹಿಂದೆ ಲೋಕಸಭಾ ಸದಸ್ಯರಿಗೆ ಮನವಿ ಮಾಡಿದ್ದೆವು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಕೇಳಿದ್ದವು. ಆದರೆ ಸೆನ್ಸಾರ್ ಮಂಡಳಿಯಲ್ಲಿ ಕಾರ್ಯಕರ್ತರ ನೇಮಕ ಮಾಡಿದರೆ ಸಮಸ್ಯೆ ಆಗುತ್ತದೆ. ಈ ವಿಚಾರಕ್ಕೆ ಸಂಬಂಧಪಟ್ಟ ಲೋಕಸಭೆ ಸದಸ್ಯರನ್ನು ಮತ್ತೆ ಭೇಟಿಯಾಗಿ ಮನವಿ ಮಾಡುತ್ತೇವೆ. ಸಮಗ್ರ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಿದೆ’ ಎಂದು ​  ತಿಳಿಸಿದರು.

Key words: Film Chamber -President –meet- CM Siddaramaiah