Tuesday, September 22, 2026

BDA Apartments

ರವೀನಾ ಜೊತೆ ‘ಟಿಪ್ ಟಿಪ್ ಬರಸಾ ಪಾನಿ’ ಗೆ ಹೆಜ್ಜೆ ಹಾಕಿದ ಪ್ರಭಾಸ್ BDA JK_Adv BDA Adv
Home Cinema ರವೀನಾ ಜೊತೆ ‘ಟಿಪ್ ಟಿಪ್ ಬರಸಾ ಪಾನಿ’ ಗೆ ಹೆಜ್ಜೆ ಹಾಕಿದ ಪ್ರಭಾಸ್

ರವೀನಾ ಜೊತೆ ‘ಟಿಪ್ ಟಿಪ್ ಬರಸಾ ಪಾನಿ’ ಗೆ ಹೆಜ್ಜೆ ಹಾಕಿದ ಪ್ರಭಾಸ್

ಬೆಂಗಳೂರು, ಆಗಸ್ಟ್ 27, 2019 (www.justkannada.in): ಪ್ರಭಾಸ್ ಸದ್ಯ ಸಾಹೋ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ.

‘ಸಾಹೋ’ ಚಿತ್ರದ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಅದಕ್ಕಾಗಿ ಪ್ರಭಾಸ್ ಹಲವು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನೃತ್ಯ ರಿಯಾಲಿಟಿ ಕಾರ್ಯಕ್ರಮ ‘ನಚ್ ಬಲಿಯೆ 9’ರಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ಪ್ರಭಾಸ್ ಹಾಗೂ ರವೀನಾ ನೃತ್ಯ.

ರವೀನಾ ಅಭಿನಯದ ಮೊಹ್ರಾ ಚಿತ್ರದ ‘ಟಿಪ್ ಟಿಪ್ ಬರಸಾ ಪಾನಿ’ ಗೆ ಹೆಜ್ಜೆ ಹಾಕಿದ ಇಬ್ಬರೂ ಹಳೆಯ ಸಿನಿಮಾವನ್ನು ನೆನಪಿಸಿದರು.