Thursday, August 6, 2026

BDA Apartments

Home Cinema ಈ ವಾರಾಂತ್ಯದಿಂದ ಜೀ ಕನ್ನಡದಲ್ಲಿ ನಗಿಸಲು ಬರ್ತಿದ್ದಾರೆ ‘ಕಾಮಿಡಿ ಕಿಲಾಡಿಗಳು’

ಈ ವಾರಾಂತ್ಯದಿಂದ ಜೀ ಕನ್ನಡದಲ್ಲಿ ನಗಿಸಲು ಬರ್ತಿದ್ದಾರೆ ‘ಕಾಮಿಡಿ ಕಿಲಾಡಿಗಳು’

ಬೆಂಗಳೂರು, ಆಗಸ್ಟ್ 27, 2019 (www.justkannada.in): ಈ ವಾರಾಂತ್ಯದಿಂದ ಎಲ್ಲರನ್ನು ನಗಿಸಲು ಮತ್ತೆ ಕಾಮಿಡಿ ಕಿಲಾಡಿಗಳು ಬರುತ್ತಿದ್ದಾರೆ.

ಹೌದು. ‘ಕಾಮಿಡಿ ಕಿಲಾಡಿಗಳು’ ಸೀಸನ್ 3 ಇದೇ ಆ.31 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಶೋ ಪ್ರಸಾರವಾಗಲಿದೆ.

ಈಗಾಗಲೇ 2 ಶೋಗಳು ಯಶಸ್ವಿಯಾಗಿ ಮುಗಿದಿದ್ದವು. ಇದೀಗ ಅದೇ ಉತ್ಸಾಹದೊಂದಿಗೆ ಮೂರನೇಯ ಸರಣಿ ಶುರುವಾಗುತ್ತಿದೆ. ಮೆಗಾ ಆಡಿಷನ್ ಮೂಲಕ ಕರ್ನಾಟಕಕ್ಕೆ ಪರಿಚಯಿಸುವ ಮತ್ತೊಂದು ಪ್ರಯತ್ನಕ್ಕೆ ಸಜ್ಜಾಗಿ ನಿಂತಿದೆ ‘ಕಾಮಿಡಿ ಕಿಲಾಡಿಗಳು’ ವೇದಿಕೆ.

ಎಂದಿನಂತೆ ತೀರ್ಪುಗಾರರಾಗಿ ನಿರ್ದೇಶಕ ಯೋಗರಾಜ್ ಭಟ್, ‘ನವರಸ ನಾಯಕ’ ಜಗ್ಗೇಶ್ ಹಾಗೂ ನಟಿ ರಕ್ಷಿತಾ ಪ್ರೇಮ್ ಮುಂದುವರಿಯಲಿದ್ದು, ಮಾಸ್ಟರ್ ಆನಂದ್ ಅವರ ನಿರೂಪಣೆ ಇರಲಿದೆ.