Tuesday, September 22, 2026

BDA Apartments

Home Front Page ಬಜರಂಗದಳ ಹನುಮಂತನ ಫೋಟೊ ಹಿಡಿದು  ಕಟ್ಟಿದ ಸಂಘಟನೆ: ಕಾಂಗ್ರೆಸ್ ಸರ್ವನಾಶವಾಗುತ್ತೆ- ಸಚಿವ ಆರ್.ಅಶೋಕ್ ಕಿಡಿ.

ಬಜರಂಗದಳ ಹನುಮಂತನ ಫೋಟೊ ಹಿಡಿದು  ಕಟ್ಟಿದ ಸಂಘಟನೆ: ಕಾಂಗ್ರೆಸ್ ಸರ್ವನಾಶವಾಗುತ್ತೆ- ಸಚಿವ ಆರ್.ಅಶೋಕ್ ಕಿಡಿ.

ರಾಮನಗರ,ಮೇ,4,2023(www.justkannada.in): ಬಜರಂಗದಳ ಸಂಘಟನೆಯನ್ನ ನಿಷೇಧಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ  ಉಲ್ಲೇಖಿಸಿರುವ ಕಾಂಗ್ರೆಸ್ ವಿರುದ್ದ ಸಚಿವ ಹಾಗೂ ಕನಕಪುರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಕಿಡಿಕಾರಿದ್ದಾರೆ.

ಕನಕಪುರದಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್, ಬ್ಯಾನ್ ಮಾಡ್ತೇವೆಂದು ಹೇಳಿ ಕಾಂಗ್ರೆಸ್ ಮತ ಕಳೆದುಕೊಂಡಿದೆ. ಬಜರಂಗದಳ ಹನುಮಂತನ ಫೋಟೊ ಹಿಡಿದು  ಕಟ್ಟಿದ ಸಂಘಟನೆ. ಪಿಎಫ್ ಐಗೆ ಬಜರಂಗದಳವನ್ನ ಹೋಲಿಕೆ  ಮಾಡಿದ್ದನ್ನ ಖಂಡಸುತ್ತೇನೆ. ಕಾಂಗ್ರೆಸ್ ಸರ್ವನಾಶವಾಗುತ್ತದೆ. ಲಂಕೆಗೆ ಬೆಂಕಿ ಇಟ್ಟ ಹಾಗೆ ಕಾಂಗ್ರೆಸ್ ಗೆ ಜನರು ಬೆಂಕಿ ಇಡುತ್ತಾರೆ ಎಂದು ಆಕ್ರೋಶ ವ್ಯಕ್ತಡಿಸಿದರು.ಬಜರಂಗದಳ ಹನುಮಂತನ ಫೋಟೊ ಹಿಡಿದು ಕಟ್ಟಿದ ಸಂಘಟನೆ ashok

‘ಭಜರಂಗದಳ ‌ಸಿಂಬಲ್ ಹನುಮಂತ, ಅದಕ್ಕೆ ಕಾಂಗ್ರೆಸ್​ನವರು ಕೊಡಲಿ ಪೆಟ್ಟು ಹಾಕಿದ್ದಾರೆ.ಜೊತೆಗೆ ಅದನ್ನ ಸಮರ್ಥನೆ ಮಾಡುತ್ತಿದ್ದಾರೆ. ಭಜರಂಗದಳ ಪ್ರಾರಂಭವಾಗಿ 40-50 ವರ್ಷ ಆಗಿದೆ ಆವಾಗಿನಿಂದಲೂ ಕಾಂಗ್ರೆಸ್​ನವರು ಮಣ್ಣು ತಿನ್ನುತ್ತಿದ್ದಾರೆ. ಹಿಂದೂ ಸಂಘಟನೆ ಬಗ್ಗೆ ಕಣ್ಣು ಹಾಕಿರುವುದು ದ್ರೋಹ. ಜನರೇ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದಾರೆ. ನಾನು ಬೆಂಬಲ ಕೊಡುತ್ತೇನೆ. ಸಂಜೆ ನಾನು ಕೂಡ ಪಾಲ್ಗೊಳ್ಳುತ್ತೇನೆ ಎಂದು ಆರ್.ಅಶೋಕ್ ತಿಳಿಸಿದರು.

Key words: Bajrang Dal – organization – Hanuman’s- photo-Minister -R. Ashok