Monday, September 21, 2026

BDA Apartments

Home Front Page ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವಿಸ್  ವಿರುದ್ದ ಎಂಇಎಸ್ ನಿಂದ ಕಪ್ಪು ಬಾವುಟ ಪ್ರದರ್ಶನ.

ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವಿಸ್  ವಿರುದ್ದ ಎಂಇಎಸ್ ನಿಂದ ಕಪ್ಪು ಬಾವುಟ ಪ್ರದರ್ಶನ.

ಬೆಳಗಾವಿ,ಮೇ,4,2023(www.justkannada.in):  ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನಾವಿಸ್ ವಿರುದ್ಧ ಎಂಇಎಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್ ಪರ  ದೇವೇಂದ್ರ ಫಡ್ನಾವಿಸ್ ಪ್ರಚಾರಕ್ಕಿಳಿದಿದ್ದರು. ಎಂಇಎಸ್ ಅಭ್ಯರ್ಥಿಗಳ ವಿರುದ್ದ ಪ್ರಚಾರಕ್ಕೆ ಆಗಮಿಸಿದ್ದಕ್ಕೆ ಎಂಇಎಸ್ ಆಕ್ಷೇಪ ವ್ಯಕ್ತಪಡಿಸಿದೆ.

ಈ ನಡುವೆ  ನಗರದ ತಿಲಕ್ ಚೌಕ್ ನಲ್ಲಿ ದೇವೇಂದ್ರ ಫಡ್ನಾವಿಸ್ ವಿರುದ್ದ ಎಂಇಎಸ್ ಕಾರ್ಯಕರ್ತರು ಕಪ್ಪು ಭಾವುಟ ಪ್ರದರ್ಶಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Black flag-  MES- against- Maharashtra DCM -Devendra Fadnavis.