Thursday, August 6, 2026

BDA Apartments

Home Front Page ಪದ್ಮನಾಭನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್  ನಾಮಪತ್ರ ಸಲ್ಲಿಸಲಿದ್ದಾರೆ- ಡಿ.ಕೆ ಶಿವಕುಮಾರ್ .

ಪದ್ಮನಾಭನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್  ನಾಮಪತ್ರ ಸಲ್ಲಿಸಲಿದ್ದಾರೆ- ಡಿ.ಕೆ ಶಿವಕುಮಾರ್ .

ಬೆಂಗಳೂರು,ಏಪ್ರಿಲ್,19,2023(www.justkannada.in):  ಪದ್ಮನಾಭನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್  ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್  ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಪದ್ಮನಾಭನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಘುನಾಥನಾಯ್ಡು ನಾಮಪತ್ರ ಸಲ್ಲಿಸಲಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣವಿದೆ ಪದ್ಮನಾಭ ನಗರದಲ್ಲಿ ಡಿ.ಕೆ ಸುರೇಶ್ ಸಹ  ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಜೆಡಿಎಸ್ ಚೆಸ್ ಆಡ್ತಿದ್ದಾರೆ ನಾವು ನೋಡುತ್ತಿದ್ದೇವೆ ಎಂದು ಟಾಂಗ್ ನೀಡಿದರು.

ಯಾರೆಲ್ಲಾ ನಮ್ಮ ಜೊತೆ ಇದ್ದಾರೆ ಅವರ ಮೇಲೆಲ್ಲಾ ಐಟಿ ದಾಳಿ ನಡೆಸುತ್ತಿದೆ ಕಾಂಗ್ರೆಸ್ ನವರನ್ನ ಹೆದರಿಸೋಕೆ ಏನು ಬೇಕಾದರೂ ಮಾಡಲಿ.  ಅವರು ಏನೇ ಮಾಡಿದರೂ ರಾಜ್ಯದಲ್ಲಿ ಬದಲಾವಣೆ ತರುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: DK Suresh – file nomination – Congress candidate – Padmanabhanagar – DK Shivakumar.