Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲಿಸಲು ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ- ಮಾಜಿ ಸಿಎಂ ಹೆಚ್.ಡಿಕೆ ಹೊಸಬಾಂಬ್.

ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲಿಸಲು ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ- ಮಾಜಿ ಸಿಎಂ ಹೆಚ್.ಡಿಕೆ ಹೊಸಬಾಂಬ್.

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಮೈಸೂರು,ಏಪ್ರಿಲ್,6,2023(www.justkannada.in) ವರುಣಾದಲ್ಲಿ ಸಿದ್ದರಾಮಯ್ಯರನ್ನ ಗೆಲ್ಲಿಸಲು ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದರು.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ -ಬಿಜೆಪಿ ಮೈತ್ರಿ ಮಾಡಿಕೊಂಡಿವೆ.  ಸಿದ್ದರಾಮಯ್ಯರನ್ನ ಗೆಲ್ಲಿಸಲು ಬಿಜೆಪಿ ಅನುಕೂಲ ಮಾಡಿಕೊಡುತ್ತಿದೆ.  ವರುಣಾ ಕ್ಷೇತ್ರದಲ್ಲಿ ಬಿಜೆಪಿಯವರು ಸಮರ್ಥ ಅಭ್ಯರ್ಥಿ ಹಾಕ್ತಿಲ್ಲ.  ಬಿಜೆಪಿ-ಜೆಡಿಎಸ್ ಒಳ್ಳ ಒಪ್ಪಂದ ಅಲ್ಲ,  ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್ 123ಸ್ಥಾನ ಗೆಲ್ಲಲು ಹೋರಾಟ ಮಾಡುತ್ತಿದೆ ಎಂದು ಹೇಳಿದರು.

ಬಿಜೆಪಿಯಲ್ಲಿ ಮೋದಿಯಂತ ಸ್ಟಾರ್ ನಟರೇ ಇದ್ದಾರೆ . ಮೋದಿ ಕೈಯಲ್ಲೇ ಜನರನ್ನ ಸೆಳೆಯಲು ಆಗಿಲ್ಲ. ಇನ್ನು ಈ  ಸ್ಟಾರ್ ನಟರು ಏನು ಮಾಡುತ್ತಾರೆ ನೋಡೋಣಾ ಎಂದು ಹೆಚ್.ಡಿಕೆ ಲೇವಡಿ ಮಾಡಿದರು.ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಹಾಸನದಿಂದ ಕಾರ್ಯಕರ್ತನಿಗೆ ಟಿಕೆಟ್ ಎಂದು ಹೇಳಿದ್ದೇನೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ ಎಂದರು.

ಇನ್ನು ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿಕೆ, ಅಭ್ಯರ್ಥಿ ಇಲ್ಲದ್ದಕ್ಕೆ  ಅನಿತಾ ಅವರು 2ಬಾರಿ ಸ್ಪರ್ಧಿಸಿದ್ದರು.  ಈ ಬಾರಿ ಅನಿತಾ ಸ್ಪರ್ಧಿಸಲ್ಲ. ಅಗತ್ಯ ವಿದ್ದರೇ ಪಕ್ಷ ಸಂಘಟನೆಗೆ ಓಡಾಡುತ್ತಾರೆ ಎಂದರು.

Key words: Congress-BJP  – win -Siddaramaiah – Varuna- Former CM -HDK