ಅದಾನಿ ಕುರಿತು ಜೆಪಿಸಿ ತನಿಖೆಗೆ ವಹಿಸಿಲ್ಲ: ದೇಶದ ಸಂಪತ್ತು ರಕ್ಷಣೆಗಾಗಿ ಹೋರಾಟ-ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ.

ನವದೆಹಲಿ,ಏಪ್ರಿಲ್,6,2023(www.justkannada.in): ಅದಾನಿ ಕುರಿತು ಜೆಪಿಸಿ ತನಿಖೆಗೆ ಎಲ್ಲಾ ವಿಪಕ್ಷಗಳು ಆಗ್ರಹಿಸಿವೆ. ಆದರೆ ಕೇಂದ್ರ ಸರ್ಕಾರ ಜೆಪಿಸಿ ತನಿಖೆಗೆ ವಹಿಸಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರ ವಿಪಕ್ಷಗಳ ಬಾಯಿ  ಮುಚ್ಚುಸಲು ಯತ್ನ ಮಾಡುತ್ತಿದೆ. ಎರಡುವರೆ ವರ್ಷದಲ್ಲಿ  ಗೌತಮ್ ಅದಾನಿ ಸಂಪತ್ತು ಹೆಚ್ಚಾಗಿದೆ.  ಕೇವಲ ಓರ್ವ ವ್ಯಾಪರಿಗೆ ಸರ್ಕಾರ ಎಲ್ಲಾ ಟೆಂಡರ್ ಗಳನ್ನ ನೀಡಿದೆ. ಕೇವಲ ಭಾಷಣದಿಂದ ಯಾವುದೇ ಕೆಲಸ ನಡೆಯಲ್ಲ ಜನರ ಹಣವನ್ನ ಕೇವಲ ಓರ್ವ ಉದ್ಯಮಿಗೆ ಯಾಕೆ ನೀಡುತ್ತಿದ್ದಾರೆ…? ಎಂದು ಪ್ರಶ್ನಿಸಿದರು.

ದೇಶದ ಸಂವಿಧಾನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮೋದಿ ಸರ್ಕಾರ ಹೇಳಿದ ಯಾವುದನ್ನೂ ಮಾಡಿ ತೋರಿಸಿಲ್ಲ. ದೇಶದ ಸಂಪತ್ತು ರಕ್ಷಣೆಗಾಗಿ ನಾವು ವಿಪಕ್ಷಗಳು ಹೋರಾಟ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words:  AICC-President-Mallikarjuna Kharge – against – Central government