ಕಾಂಗ್ರೆಸ್ ಉಚಿತ ಘೋಷಣೆ ಜನರನ್ನ ಮೋಸ ಮಾಡುವ ತಂತ್ರ: ಇದಕ್ಕೆ ಮರುಳಾಗಬೇಡಿ- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್.

ಬೆಂಗಳೂರು,ಏಪ್ರಿಲ್,6,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಈ ನಡುವೆ  ರಾಜ್ಯದ ಜನರಿಗೆ ಉಚಿತ ಕೊಡುಗೆಗಳ ಘೋಷಣೆ ಮಾಡಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಾಲ್ಕು ಉಚಿತ ಘೋಷಣೆಯನ್ನ ಮಾಡಿದೆ. ಈಗಾಗಲೇ ಕೆಲರಾಜ್ಯಗಳಲ್ಲಿ ಘೋಷಣೆ ಮಾಡಿ ಜನತೆಗೆ ಕಾಂಗ್ರೆಸ್ ನಾಯಕರು ಮೋಸ ಮಾಡಿದ್ದಾರೆ.  ಕರ್ನಾಟಕ ರಾಜ್ಯದ ಬಜೆಟ್ 3 ಲಕ್ಷ ಕೋಟಿ ರೂ..  ಕಾಂಗ್ರೆಸ್ ನವರು ಕೊಟ್ಟ ಭರವಸೆಗಳಿಗೆ 1 ಲಕ್ಷ ಕೊಟಿ ರೂ. ಖರ್ಚಾಗುತ್ತದೆ. ಉಳಿದ 2 ಲಕ್ಷ ಕೋಟಿ ರೂ.ನಲ್ಲಿ ಸರ್ಕಾರ ನಡೆಸಬೇಕು . ಉಳಿದ ಹಣದಲ್ಲಿ ಹೇಗೆ ಅಧಿಕಾರ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇದು ಜನರನ್ನ ಮೋಸ ಮಾಡುವ ತಂತ್ರವಾಗಿದೆ. ಕರ್ನಾಟಕದ  ಜನರು ಕಾಂಗ್ರೆಸ್ ನವರ ಭರವಸೆಗಳಿಗೆ ಮರುಳಾಗಬೇಡಿ ಎಂದು ನಿರ್ಮಲಾ ಸೀತಾರಾಮನ್ ಮನವಿ ಮಾಡಿದರು.

Key words: Congress -free -announcement – Union Minister -Nirmala Sitharaman- Criticism