Wednesday, August 5, 2026

BDA Apartments

Home Front Page ಬಿಜೆಪಿಗೆ ಮತ ಹಾಕಲು ಜನ ತುದಿಗಾಲಲ್ಲಿ ನಿಂತಿದ್ದಾರೆ: ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ- ನಳೀನ್ ಕುಮಾರ್...

ಬಿಜೆಪಿಗೆ ಮತ ಹಾಕಲು ಜನ ತುದಿಗಾಲಲ್ಲಿ ನಿಂತಿದ್ದಾರೆ: ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ- ನಳೀನ್ ಕುಮಾರ್ ಕಟೀಲ್.

ಬೆಳಗಾವಿ,ಮಾರ್ಚ್,2,2023(www.justkannada.in): ರಾಜ್ಯದ ಜನರು ಬಿಜೆಪಿಗೆ ಮತ ಹಾಕಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಬೆಳಗಾವಿಯ ನಂದಗಡದಲ್ಲಿ ಬಿಜೆಪಿ ವಿಜಯಯಾತ್ರೆಗೆ ಚಾಲನೆ ದೊರೆತ ಬಳಿಕ ಮಾತನಾಡಿದ ನಳೀನ್ ಕುಮಾರ್ ಕಟೀಲ್, 224 ಕ್ಷೇತ್ರಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ಜನ ಬಿಜೆಪಿಗೆ ಮತ ಹಾಕಲು ತುದಿಗಾಲಲ್ಲಿ ನಿಂತಿದ್ದೇವೆ ಅಂತಿದ್ದಾರೆ. ಈ ಬಾರಿ ಬಿಜೆಪಿ 150 ಸ್ಥಾನಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ  ಬರುತ್ತೇವೆ. ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಆಗುವ ವಾತಾವರಣವಿದೆ ಎಂದರು.

ಬಿಜೆಪಿ ವಿಜಯ ಸಂಕಲ್ಪಯಾತ್ರೆಯಿಂದ ಪ್ರಜಾಧ್ವನಿಯಾತ್ರೆ ನಲುಗಿದೆ.  ಬಿಎಸ್ ವೈ ಮಾರ್ಗದರ್ಶನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

Key words: People – BJP-power- Naleen Kumar Kateel.