ಕಾಕ್ಲಿಯಾರ್‌ ಇಂಪ್ಲಾಂಟ್‌ ಯೋಜನೆಯಡಿ ಇದೇ ವರ್ಷ 115 ಶಸ್ತ್ರಚಿಕಿತ್ಸೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

ಬೆಂಗಳೂರು, ಮಾರ್ಚ್‌ 2, 2023(www.justkannada.in): ರಾಜ್ಯ ಸರ್ಕಾರದ ಕಾಕ್ಲಿಯಾರ್‌ ಇಂಪ್ಲಾಂಟ್‌ ಯೋಜನೆಯಡಿ, ಇದೇ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂತಹ ಕ್ರಮಗಳ ಮೂಲಕ ಕಿವಿಯ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಪ್ರತಿ ವರ್ಷ ಮಾರ್ಚ್‌ 3 ರಂದು ವಿಶ್ವ ಶ್ರವಣ ದಿನ ಆಚರಿಸುತ್ತಿದ್ದು, ಈ ವರ್ಷ “ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ, ಬನ್ನಿ ವಾಸ್ತವವಾಗಿಸೋಣ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ, ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಕಿವಿಯ ಆರೈಕೆ ಹಾಗೂ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ತರಲಾಗಿದೆ. ಇದರಲ್ಲಿ, ಈ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯಾರ್‌ ಶಸ್ತ್ರಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2,00,305 ಮಂದಿಗೆ ಶ್ರವಣ ದೋಷ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಾದ್ಯಂತ 430 ದಶಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050 ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ. ರಾಜ್ಯದಲ್ಲಿ 2008-09 ರಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ವಿಭಾಗದಿಂದ, 2,00,305 ಶ್ರವಣ ದೋಷವುಳ್ಳವರನ್ನು ಹಾಗೂ 35,418  ಗಂಭೀರ ಶ್ರವಣ ದೋಷವುಳ್ಳವರನ್ನು ಗುರುತಿಸಲಾಗಿದೆ. 5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲಾ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಈ ವಿಶ್ವ ಶ್ರವಣ ದಿನದಂದು, ಎಲ್ಲಾ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ ಚಿಕಿತ್ಸೆ ಒದಗಿಸಲಾಗುವುದು. 6 ವರ್ಷದೊಳಗಿನ ಮಕ್ಕಳಲ್ಲಿ ಎರಡು ಕಿವಿಗಳಲ್ಲಿ ಗಂಭೀರ ಸ್ವರೂಪದ ಶ್ರವಣ ದೋಷಗಳನ್ನು ಗುರುತಿಸಿ ಕಾಕ್ಲಿಯಾರ್‌ ಇಂಪ್ಲಾಂಟ್‌ ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳಿಂದ ಶ್ರವಣ ಸಾಧನಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.

20 ಡಿಎಲ್ ಗಳಿಗಿಂತ ಕಡಿಮೆ ಶಬ್ದವನ್ನು ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು.

ಶ್ರವಣ ದೋಷಕ್ಕೆ ಕಾರಣ.

ಜೆನೆಟಿಕ್ಸ್, ಜೋರಾದ ಶಬ್ದ, ಸೋಂಕು, ದೀರ್ಘಕಾಲದ ಕಾಯಿಲೆಗಳು ( ಟಿ.ಬಿ, ಕ್ಯಾನ್ಸರ್‌), ಗರ್ಭಿಣಿಯರಲ್ಲಿ ಉಂಟಾಗುವ ಸೋಂಕುಗಳು (TORCH) ದೀರ್ಘ ಕಾಲ ತೆಗೆದುಕೊಳ್ಳುವ ಔಷಧಿಗಳಿಂದ, ರಕ್ತ ಸಂಬಂಧದಲ್ಲಿ ಮದುವೆ, ಹೆರಿಗೆ ವೇಳೆ ಸಮಸ್ಯೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಆಗದ ಬೆಳವಣಿಗೆ, ಜೋರಾದ ಪೆಟ್ಟು ಬೀಳುವುದರಿಂದ, ಕಿವಿಯೊಳಗೆ ಅನವಶ್ಯಕವಾಗಿ ಕಡ್ಡಿ, ಪೆನ್ಸಿಲ್‌ ಅಥವಾ ಇನ್ಯಾವುದೇ ವಸ್ತುಗಳನ್ನು ಹಾಕುವುದರಿಂದ ಶ್ರವಣ ದೋಷ ಉಂಟಾಗುತ್ತದೆ.

ಶ್ರವಣ ದೋಷ ತಡೆಗಟ್ಟುವ ಕ್ರಮ

ನಿಯಮಿತ ಶ್ರವಣ ಪರೀಕ್ಷೆ, ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ, ವಯಸ್ಕರು ಹೆಚ್ಚು ಶಬ್ದವನ್ನು ನಿರಂತರವಾಗಿ ಕೇಳುವುದನ್ನು ಕಡಿಮೆ ಮಾಡುವುದರಿಂದ, ಹೆಚ್ಚು ಶಬ್ದ ಇರುವಲ್ಲಿ (ಕಾರ್ಖಾನೆ] ಕಿವಿಗಳಿಗೆ ಹಿಯರ್‌ ಪ್ಯಾಡ್ಸ್ ಅಳವಡಿಕೆ, ರಕ್ತ ಸಂಬಂಧದಲ್ಲಿ ಮದುವೆಯಾಗಬಾರದು, ಪ್ರಾಥಮಿಕ ಹಂತದಲ್ಲಿ ಕಿವಿಯ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ, ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಿಂದಲೇ ಪಡೆಯುವುದು, ಧೀರ್ಘ ಕಾಲದ ಚಿಕಿತ್ಸಾವಧಿಯಲ್ಲಿ ನಿಯಮಿತವಾಗಿ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದು.

ಶ್ರವಣ ದೋಷಕ್ಕೆ ಸರಿಯಾದ ಚಿಕಿತ್ಸೆ

ಪ್ರಾರಂಭಿಕ ಹಂತದಲ್ಲೇ ಶ್ರವಣ ದೋಷ ಪರೀಕ್ಷೆ, ಗುಗ್ಗೆ ಮತ್ತು ಇತರೆ ಸೋರಿಕೆಯಿದ್ದಲ್ಲಿ ಕಿವಿಯನ್ನು ಸ್ವಚ್ಛಗೊಳಿಸುವುದು ಮತ್ತು ಚಿಕಿತ್ಸೆ ನೀಡುವುದು, ಗಂಟಿನ ತೊಂದರೆ, ಕಿವಿಯ ತಮಟೆಗೆ ಪೆಟ್ಟಾಗಿದ್ದಲ್ಲಿ ಚಿಕಿತ್ಸೆ ನೀಡುವುದು, ಸೋಂಕು ಅಥವಾ ಉರಿಯೂತ ಇದ್ದಲ್ಲಿ ಚಿಕಿತ್ಸೆ ನೀಡುವುದು.

Key words: 115 surgeries –Cochlear- Implant Scheme -Minister -Dr. K. Sudhakar

ENGLISH SUMMARY…

115 surgeries under Cochlear Implant Scheme,this year: Health and Medical Education Minister Dr. K. Sudhakar

World Hearing Day: Ear and hearing care for all. Let’s make it a reality

Bengaluru, March 2, Thursday

Under the cochlear implant scheme of the state government, 115 children were operated this year. Health and Medical Education Minister Dr. K. Sudhakar said that ear and hearing care has been given priority through such measures.

World Hearing Day is celebrated on 3rd March every year and this year the theme is “Ear and hearing care for all, let’s make it a reality”. All health workers are being trained in ear care, first aid and screening. Through this, ear care and hearing care are being merged into primary health care services. A cochlear implant scheme has been introduced to address severe hearing loss in children under 6 years of age. Under this initiative, 115 children have been operated this year and the remaining 577 beneficiaries are at various states of preparation for cochlear surgery, minister informed.

Hearing impairment in 2,00,305 people

According to the World Health Organization, 430 million people worldwide suffer from hearing loss. By 2050, this number is expected to cross 700 million. The National Hearing Loss Control and Prevention Program was implemented in the state in 2008-09 and training for instrumentation and surgery is being imparted in all districts. During the last 5 years, 2,00,305 hearing impaired and 35,418 severely hearing impaired have been identified through NPPCD program. 2,381 children under 5 years have severe hearing loss. 10,213 surgeries for ear problems were done with the help of all ENT specialists in the state. Minister said that 11,857 beneficiaries have been given hearing aids.

On this World Hearing Day, hearing screening camp will be conducted in all districts and treatment will be provided. In children under 6 years of age, those who are suffering from severe hearing defect will be identified and cochlear implant surgery will be performed if required. The minister explained that arrangements will be made to provide hearing aids through the Department of Empowerment of Differently Abled and other organizations.

About Hearing Impairment

Anyone who cannot hear sounds below 20 dl is likely to have hearing loss. Hearing loss can occur at any age for a variety of reasons.

Cause of hearing loss

Genetics, loud noise, infection, chronic diseases (TB, cancer), infections in pregnant women (TORCH), due to long-term medications, consanguineous marriages, problems during delivery, premature birth, growth not according to age, due to loud blows, putting a stick, pencil or any other object in the ear and so on.

Measures to prevent hearing loss

Regular hearing test, hearing test for newborns, hearing test for pregnant women, reducing the continuous exposure of adults to loud noise, hearing pads for ears where there is a lot of noise [factory], not marrying in blood relations, identifying and treating ear problems at the primary stage, taking any medication only on doctor’s advice, regular hearing test during prolonged treatment period.

Proper treatment for hearing loss

Early hearing screening, ear cleaning and treatment for clogging and other leaks, ear problems, eardrum injury, infection or inflammation.