Tuesday, October 13, 2026

Dasara Wishes

Happy Dasara
Home Front Page ಮೈಸೂರು ದಸರಾ ಸಿದ್ಧತೆ ನಡುವೆಯೇ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ರನ್ನ ವರ್ಗಾವಣೆ ಮಾಡಿದ ರಾಜ್ಯ...

ಮೈಸೂರು ದಸರಾ ಸಿದ್ಧತೆ ನಡುವೆಯೇ ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ರನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ…

ಮೈಸೂರು,ಆ,22,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿರುವ ಬೆನ್ನಲ್ಲೆ ಮೈಸೂರು ಜಿಲ್ಲಾಧಿಕಾರಿ  ಅಭಿರಾಂ ಜೀ ಶಂಕರ್ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಡಿಸಿ ಅಭಿರಾಂ ಜೀ ಶಂಕರ್ ಅವರ ಜಾಗಕ್ಕೆ ನಿತೀಶ್ ಪಾಟೀಲ್ ಅವರನ್ನ ರಾಜ್ಯ ಸರ್ಕಾರ ನೇಮಕ ಮಾಡಿದೆ. ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗಿದ್ದು ಇಂದು ಗಜಪಯಣಕ್ಕೆ ಚಾಲನೆ ಸಿಕ್ಕಿದೆ. ಈ ಮಧ್ಯೆ ಮೈಸೂರು ಜಿಲ್ಲಾಧಿಕಾರಿಯನ್ನ ವರ್ಗಾವಣೆ ಮಾಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿ ಅಭಿರಾಂ ಜೀ ಶಂಕರ್  ದಸರಾ ಮಹೋತ್ಸವ-2019ಕ್ಕೆ ರೂಪರೇಷೆ ಸಿದ್ಧಪಡಿಸಿದ್ದರು. ಇದೀಗ   ಅಭಿರಾಂ ಜೀ ಶಂಕರ್ ಅವರನ್ನ ವರ್ಗಾವಣೆ ಮಾಡಿರುವುದರಿಂದ ದಸರಾ ಸಿದ್ಧತೆ ಕಾರ್ಯಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.  ಹಾಗೆಯೇ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು ಇನ್ನು ನೇಮಕವಾಗಿಲ್ಲ.

Key words: dasara-mysore-DC-Abiram ji Shankar-transfer