ಬಿಜೆಪಿ ಕೈವಾಡದಿಂದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಂಧನ ಎಂಬ ‘ಕೈ’ ಆರೋಪಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್…

ಮೈಸೂರು,ಆ,22,2019(www.justkannada.in): ಬಿಜೆಪಿ  ಕೈವಾಡದಿಂದ ಮಾಜಿ ಕೇಂದ್ರ ಸಚಿವ  ಪಿ. ಚಿದಂಬರಂ  ಅವರನ್ನ ಬಂಧಿಸಲಾಗಿದೆ ಎಂದು  ಕಾಂಗ್ರೆಸ್ ಆರೋಪಿಸಿರುವ ಬಗ್ಗೆ ವ್ಯಂಗ್ಯವಾಡಿರುವ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಿಂದ  ಇದು  ಅಪೇಕ್ಷಿತ ಉತ್ತರ ಎಂದಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ , ಹತ್ತಾರು ವರ್ಷ ಆಡಳಿತ ನಡೆಸಿರುವ  ಕಾಂಗ್ರೆಸ್ ಬಹುಶಃ ತಮ್ಮ ಆಡಳಿತದ ಅವಧಿಯಲ್ಲಿ  ಈ  ರೀತಿಯ ಆಡಳಿತ ವ್ಯವಸ್ಥೆಯನ್ನ  ದುರ್ಬಳಕೆ ಮಾಡಿಕೊಂಡಿರಬೇಕು. ಇದು ಬಿಜೆಪಿ ಸೇಡಿನ ರಾಜಕಾರಣ ಅಲ್ಲ ಎಂದರು.

ನ್ಯಾಯಾಂಗ ಮೇಲೆ ನಂಬಿಕೆ ಇರಬೇಕು, ಒಂದು ರಾಷ್ಟ್ರೀಯ ಪಕ್ಷವಾಗಿ ಈ ರೀತಿಯ ಅಪವಾದ ಮಾಡೋದು ಸರಿಯಲ್ಲ. ಸಿಬಿಐ, ಇಡಿ ಮಾಹಿತಿ ಕೇಳುವುದು ಅವರ ಅಧಿಕಾರ,  ಆದ್ರೆ  ಈ  ವಿಚಾರದಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ  ಕಾಂಗ್ರೆಸ್  ಸರಿಯಾಗಿ ನಡೆದುಕೊಂಡಿಲ್ಲ. ಈ  ವಿಚಾರದಲ್ಲಿ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಬೇಕು ಎಂದು ನಿರ್ಮಲಾ ಸೀತಾರಾಮನ್ ಗರಂ ಆದರು.

ತೆರಿಗೆ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ವ್ಯವಹಾರಸ್ಥರ ನಡುವೆ ಮುಖಾಮುಖಿ ಚರ್ಚೆ ಇನ್ನೂ ಮುಂದೆ ಇರೋದಿಲ್ಲ….

ತೆರಿಗೆ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳ ವ್ಯವಹಾರಸ್ಥರ ನಡುವೆ ಮುಖಾಮುಖಿ ಚರ್ಚೆ ಇನ್ನೂ ಮುಂದೆ ಇರೋದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಈ ಕುರಿತು ಮೈಸೂರಿನಲ್ಲಿ ನಡೆದ ದೇಶದ ಮೂರನೇ ಸಭೆ ಬಳಿಕ ಮಾಹಿತಿ ನೀಡಿದ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಮುಂದಿನ ವಿಜಯ ದಶಮಿ ಬಳಿಕ ತಾಂತ್ರಿಕ ವೇದಿಕೆ ಮೂಲಕವೇ ತೆರಿಗೆಗೆ  ಸಂಬಂಧಿಸಿದ ಎಲ್ಲಾ ಸಂವಹನಗಳು ನಡೆಯಲಿವೆ. ಗುಜರಾತ್, ವಾರಾಣಸಿ ನಂತರ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಸಭೆ ನಡೆಸಲಾಗಿದೆ ಎಂದರು.

Key words: Former Union Minister- P. Chidambaram- arrest- not-bjp- Union Minister -Nirmala Sitharaman- mysore