Saturday, September 19, 2026

BDA Apartments

ಲಸಿಕಾ ಮೇಳದಲ್ಲಿ 5ರಿಂದ 7 ಲಕ್ಷ ಜನರಿಗೆ ಲಸಿಕೆ- ಸಿಎಂ ಬಿಎಸ್ ಯಡಿಯೂರಪ್ಪ BDA JK_Adv BDA...
Home Front Page ಲಸಿಕಾ ಮೇಳದಲ್ಲಿ 5ರಿಂದ 7 ಲಕ್ಷ ಜನರಿಗೆ ಲಸಿಕೆ- ಸಿಎಂ ಬಿಎಸ್ ಯಡಿಯೂರಪ್ಪ.

ಲಸಿಕಾ ಮೇಳದಲ್ಲಿ 5ರಿಂದ 7 ಲಕ್ಷ ಜನರಿಗೆ ಲಸಿಕೆ- ಸಿಎಂ ಬಿಎಸ್ ಯಡಿಯೂರಪ್ಪ.

ಬೆಂಗಳೂರು,ಜೂನ್,21,2021(www.justkannada.in): ಲಸಿಕಾ ಮೇಳದಲ್ಲಿ ಸುಮಾರು 5 ರಿಂದ  7 ಲಕ್ಷ ಜನರಿಗೆ ಲಸಿಕೆ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.jk

ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಲಸಿಕಾ ಮೇಳಕ್ಕೆ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ, ಈಗಾಗಲೇ ಎಲ್ಲಾ ಜಿಲ್ಲೆಗಳಿಗೆ ಲಸಿಕೆ ಪೂರೈಸಿದ್ದೇವೆ. 2ನೇ ಡೋಸ್ ನೀಡುವುದಕ್ಕೆ ಆದ್ಯತೆ ನೀಡುತ್ತೇವೆ. ಲಸಿಕಾ ಅಭಿಯಾನಕ್ಕೆ ಜನರು ಕೈಜೋಡಿಸಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ಕಡಿಮೆಯಾಗುತ್ತಿದೆ. ಹೀಗಾಗಿ ಕೋವಿಡ್ ನಿಯಮ ಸಡಿಲಿಕೆ ಮಾಡಿದ್ದೇವೆ. ಜನರು ಕೋವಿಡ್ ನಿಯಮ ಉಲ್ಲಂಘಿಸಬಾರದು. ಬಸ್ ಸಂಚಾರ ವೇಳೆ ಬೆಂಗಳೂರಿನಲ್ಲಿ ನೂಕುನುಗ್ಗಲು ಆಗುತ್ತಿದ್ದುದ್ದನ್ನ ನೋಡಿದ್ದೇನೆ. ಜನರು ನಿಯಮ ಪಾಲಿಸಬೇಕು ಎಂದು ಸಿಎಂ ಬಿಎಸ್ ವೈ ಮನವಿ ಮಾಡಿದರು.

Key words: 5 to 7 lakh -people –vaccinate- vaccine fair-CM -BS Yeddyurappa.