ಟೈಮ್ಸ್ ಸ್ಕ್ವಯರ್ ನಲ್ಲಿ ೩,೦೦೦ ಜನರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ನ್ಯೂಯಾರ್ಕ್, ಜೂನ್ ೨೧, ೨೦೨೧ (www.justkannada.in news ): ನ್ಯೂಯಾರ್ಕ್ ನ ಐತಿಹಾಸಿಕ ಟೈಮ್ಸ್ ಸ್ಕ್ವಯರ್ ಬಳಿ ಏಳನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

ನ್ಯೂ ಯಾರ್ಕ್ ನ ಭಾರತೀಯ ರಾಯಭಾರಿ ಕಚೇರಿ, ಟೈಮ್ಸ್ ಸ್ಕ್ವಯರ್ ಅಲೈಯನ್ಸ್ನ ಸಹಯೋಗದೊಂದಿಗೆ ‘ಸಾಲ್ಸಿಟೈಸ್ ಫಾರ್ ಟೈಮ್ಸ್ ಸ್ಕ್ವಯರ್ ೨೦೨೧’ ಎಂಬ ವಿಷಯದಡಿ ಯೋಗ ದಿನವನ್ನು ಆಚರಿಸಿತು.

jk

ವಿಶ್ವ ಸಂಸ್ಥೆಯ ಜಾಗತಿಕ ವಿಷಯ ‘ಯೋಗ ಫಾರ್ ವೆಲ್‌ನೆಸ್’ಗೆ ಪೂರಕವಾಗಿ ಯೋಗ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಕಂಪನಿಗಳಿಂದ ಸಮಗ್ರ ಆರೋಗ್ಯ, ಆಯುರ್ವೇದ ಹಾಗೂ ನಿಸರ್ಗ-ಆಧಾರಿತ ವೆಲ್‌ನೆಸ್ ಉತ್ಪನ್ನಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಭಾರತದ ಬುಡಕಟ್ಟು, ಆಯುರ್ವೇದ ಹಾಗೂ ನೈಸರ್ಗಿಕ ಉತ್ಪನ್ನಗಳ ಮಳಿಗೆಗಳು ದೊಡ್ಡ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಗಧಿಪಡಿಸಿದ್ದ ಅಷ್ಟೂ ನೋಂದಣಿಗಳು ಪೂರ್ಣಗೊಂಡಿತ್ತು. ಜೊತೆಗೆ ಆನ್‌ಲೈನ್‌ನಲ್ಲಿಯೂ ಈ ಕಾರ್ಯಕ್ರಮವನ್ನು ಬಿತ್ತರಿಸುವ ಮೂಲಕ ದೊಡ್ಡ ಸಂಖ್ಯೆಯ ಜನರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಟೈಮ್ಸ್ ಸ್ಕ್ವಯರ್ ನಲ್ಲಿ ನಡೆದ ಯೋಗಾಭ್ಯಾಸ ಬೆಳಿಗ್ಗೆ ೭:೩೦ರಿಂದ ೮:೩೦ರವರೆಗೆ ೯ ಪ್ರತ್ಯೇಕ ಬ್ಯಾಚ್‌ಗಳಲ್ಲಿ ನಡೆಯಿತು.

ನ್ಯೂ ಜರ್ಸಿಯಲ್ಲಿರುವ ಸ್ಟಾಚ್ಯೂ ಆಫ್ ಲಿಬರ್ಟಿಯ ಹಿನ್ನೆಲೆಯಲ್ಲಿರುವ ಲಿಬರ್ಟಿ ಸ್ಟೇಟ್ ಪಾರ್ಕ್ನಲ್ಲಿಯೂ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿತ್ತು. ಭಾರತೀಯ ಸಂಘಟನೆಗಳ ಒಕ್ಕೂಟ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜನಪ್ರಿಯ ಯೋಗ ತರಬೇತುದಾರರಾದ ಥಾರಾ ನಟಾಲಿಯೆ ಅವರು ಯೋಗಾಭ್ಯಾಸದ ಮುಂದಾಳತ್ವವನ್ನು ವಹಿಸಿದ್ದರು.

 

key words : international-yoga-day-june-21-times-square-celebrates-yoga-day-with-over-3000-yogis.