Sunday, September 20, 2026

BDA Apartments

ಹಾಸನದಲ್ಲಿ 2540 ಹೊಸ ಕೊರೋನಾ ಪ್ರಕರಣ ಪತ್ತೆ: 20 ಮಂದಿ ಸೋಂಕಿಗೆ ಬಲಿ… BDA JK_Adv BDA Adv
Home Front Page ಹಾಸನದಲ್ಲಿ  2540 ಹೊಸ ಕೊರೋನಾ ಪ್ರಕರಣ ಪತ್ತೆ: 20 ಮಂದಿ ಸೋಂಕಿಗೆ ಬಲಿ…

ಹಾಸನದಲ್ಲಿ  2540 ಹೊಸ ಕೊರೋನಾ ಪ್ರಕರಣ ಪತ್ತೆ: 20 ಮಂದಿ ಸೋಂಕಿಗೆ ಬಲಿ…

ಹಾಸನ ,ಮೇ,7,2021(www.justkannada.in):  ಹಾಸನ ಜಿಲ್ಲೆಯಲ್ಲಿ  ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು ಇಂದು ಜಿಲ್ಲೆಯಾಧ್ಯಂತ 2,540 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk

ಈ ಕುರಿತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು , ಕಳೆದ 24 ಗಂಟೆಯಲ್ಲಿ ಜಿಲ್ಲೆಯಾಧ್ಯಂತ 2,540 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 50,583ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 488 ಜನರು ಸೇರಿದಂತೆ ಇದುವರೆಗೆ 36,461 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 13,482 ಸಕ್ರೀಯ ಸೋಂಕಿತರಿರುವುದಾಗಿ ತಿಳಿಸಿದೆ. 2540- new Corona -case -detected - Hassan.

ಇನ್ನು ಕೊರೋನಾ ಸೋಂಕಿಗೆ ಹಾಸನದಲ್ಲಿ 20 ಬಲಿಯಾಗಿದ್ದಾರೆ . ಇದರಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಬಲಿಯಾದವರ ಸಂಖ್ಯೆ 660ಕ್ಕೆ ಏರಿಕೆಯಾಗಿದೆ.

Key words: 2540- new Corona -case -detected – Hassan.