Thursday, August 13, 2026

BDA Apartments

Home Front Page ದೇಶದಲ್ಲಿ ಒಂದೇ ದಿನ ಹೊಸದಾಗಿ 17,073 ಕೋವಿಡ್ ಪ್ರಕಣಗಳು ಪತ್ತೆ.

ದೇಶದಲ್ಲಿ ಒಂದೇ ದಿನ ಹೊಸದಾಗಿ 17,073 ಕೋವಿಡ್ ಪ್ರಕಣಗಳು ಪತ್ತೆ.

ನವದೆಹಲಿ,ಜೂನ್,27,2022(www.justkannada.in): ದೇಶದಲ್ಲಿ  ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 17,073 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು,  ಒಂದೇ ದಿನದಲ್ಲಿ  17,073  ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,34,07,046ಗೆ ಏರಿಕೆಯಾಗಿದೆ. ಪ್ರಸ್ತುತ 94,420 ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 21 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 5,25,020ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಚೇತರಿಕೆ ಪ್ರಮಾಣವು ಶೇ 98.57 ಇದೆ. ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 5.62 ಇದೆ.

Key words: 17,073 –Covid- detected – single day – country.