ಹಿಮಾಲಯಕ್ಕೆ ಚಾರಣಕ್ಕೆಂದು ತೆರಳಿದ್ದ ವೈದ್ಯ ನಾಪತ್ತೆ.

ಬೆಂಗಳೂರು,ಜೂನ್,27,2022(www.justkannada.in):  ಹಿಮಾಲಯಕ್ಕೆ ಚಾರಣಕ್ಕೆಂದು ತೆರಳಿದ್ದ ಬೆಂಗಳೂರಿನ ಪ್ರತಿಷ್ಠಿತ ಮಣಿಪಾಲ್ ಆಸ್ಪತ್ರೆಯ  ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಚಂದ್ರಮೋಹನ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.  ಹಿಮಾಲಯಕ್ಕೆ ಟ್ರೆಕಿಂಗ್ ಗೆ ಹೋಗಿದದ್ಧ  ಚಂದ್ರಮೋಹನ್ ಅವರ ಫೋನ್ ಜೂನ್ 20ರ ಬಳಿಕ ಸ್ವಿಚ್ಡ್ ಆಫ್ ಆಗಿದೆ. ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

ಚಂದ್ರಮೋಹನ್ ಬೆಂಗಳೂರಿನ ವಸಂತ ನಗರದ ನಿವಾಸಿಯಾಗಿದ್ದು,  ಒಂದು ವಾರದಿಂದ ವೈದ್ಯ ಚಂದ್ರಮೋಹನ್ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ  ಕುಟುಂಬದವರಲ್ಲಿ ಆತಂಕ ಉಂಟಾಗಿದ್ದು,  ವೈದ್ಯ ನಾಪತ್ತೆ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Key words: Bangalore-Manipal-doctor-missing-Himalaya