ಕೊಟ್ಟಿಗೆ ಕಾಸಿಗೆ ಕೈಚಾಚಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಪಿಡಿಓ.

ಮೈಸೂರು,ಜನವರಿ,21,2022(www.justkannada.in): ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದ ಧನ ಸಹಾಯ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹುಣಸೂರು ತಾಲೂಕು ತಟ್ಟೆಕೆರೆ ಗ್ರಾಪಂ ಪಿಡಿಓ ಸತೀಶ್ ಕುಮಾರ್ ಎಂಬುವವರೇ ಕೊಟ್ಟಿಗೆ ಕಾಸಿಗೆ ಆಸೆಪಟ್ಟು ಎಸಿಬಿ ಬಲೆಗೆ ಬಿದ್ದಿದ್ದಾರೆ.  ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದ ಧನ ಸಹಾಯ ಬಿಡುಗಡೆ ಮಾಡಲು ಸತೀಶ್‌ ಕುಮಾರ್ ಲಂಚ ಪಡೆಯುತ್ತಿರುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ರಮೇಶ್ ಎಂಬುವವರು ಕೊಟ್ಟಿಗೆ ನಿರ್ಮಾಣಕ್ಕೆ ಸರ್ಕಾರದಿಂದ ಮೊದಲ ಕಂತಿನ ಸಹಾಯ ಧನ ಪಡೆದಿದ್ದರು. 2ನೇ ಕಂತಿನ 28 ಸಾವಿರ ರೂ. ಬಿಡುಗಡೆ ಮಾಡಬೇಕಾದರೆ 5 ಸಾವಿರ ರೂ. ಲಂಚ ನೀಡುವಂತೆ ಪಿಡಿಓ ಸತೀಶ್ ಕುಮಾರ್ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ರಮೇಶ್ ಎಸಿಬಿಗೆ ದೂರು ನೀಡಿದ್ದರು. ಈ ನಡುವೆ ಪಿಡಿಓ ಸತೀಶ್ ಕುಮಾರ್‌ ರನ್ನ ರೆಡ್‌ ಹ್ಯಾಂಡಾಗಿ ಹಿಡಿಯಲು ಎಸಿಬಿ ಅಧಿಕಾರಿಗಳ ಪ್ಲಾನ್ ರೂಪಿಸಿದ್ದು, ಎಸಿಬಿ ಅಧಿಕಾರಿಗಳ ಯೋಜನೆಯಂತೆ ಪಿಡಿಓ ಬಳಿ ರಮೇಶ್ ತೆರಳಿದ್ದರು. ಈ ವೇಳೆ ರಮೇಶ್‌ರಿಂದ ಸತೀಶ್ ಕುಮಾರ್ 5 ಸಾವಿರ ರೂ. ಲಂಚ ಪಡೆಯುವಾಗಲೇ ಎಸಿಬಿ ತಂಡ ದಾಳಿ ನಡೆಸಿದೆ.

ದಾಳಿ ನಡೆಸಿ ಪಿಡಿಓ ಸತೀಶ್ ಕುಮಾರ್‌ ನನ್ನ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದರು. ಎಸಿಬಿ ಎಸ್ಪಿ ಅರುಣಾಂಶು ಗಿರಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧರ್ಮೆಂದ್ರ, ಇನ್ಸ್‌ ಪೆಕ್ಟರ್‌ ಗಳಾದ ಚಿತ್ತರಂಜನ್, ಮೋಹನ್‌ ಕೃಷ್ಣ, ಸಿಬ್ಬಂದಿ ಗುರು, ಯೋಗೇಶ್, ಮಂಜು, ಪಾಪಣ್ಣ, ಚೇತನ್, ಮಾದೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words: PDO – fell – ACB -trap – red hand.