ಸಿನಿಮಾ ರಿಲೀಸ್ ಆನ್ಲೈನಾ ಅಥವಾ ಥಿಯೇಟರ್’ನಲ್ಲಾ….?! ಮಾಧ್ಯಮಗಳಿಗೆ ‘ಅಭಿಷೇಕ್ ಅಂಬರೀಶ್ ‘ಕಿಲಾಡಿ ಉತ್ತರ’ !

ಮೈಸೂರು, ಜನವರಿ 15, 2020 (www.justkannada.in): ಆನ್‌ಲೈನ್ ಮತ್ತು ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ವಿಚಾರಕ್ಕೆ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳಿಗೆ ನಟ ಅಭಿಷೇಕ್ ಅಂಬರೀಶ್ ಕಿಲಾಡಿ ಉತ್ತರ ನೀಡಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ನನ್ ಬಾಯಲ್ಲೂ ಏನೋ ಬಿಡಿಸೋಕೆ ಟ್ರೈ ಮಾಡ್ತೀದಿರಾ!? ಆದ್ರೆ ನಾನ್ ಹೇಳೋದಿಲ್ಲ ಎಂದು ಜಾರಿಕೊಂಡರು.

ವೈಯಕ್ತಿಕವಾಗಿ ನಾನು ಸಿನಿಮಾಗಳು ಥಿಯೇಟರ್‌ನಲ್ಲೇ ರಿಲೀಸ್ ಆಗಲಿ ಎನ್ನುತ್ತೇನೆ. ದರ್ಶನ್ ಅವರು ಕೂಡ ಅದನ್ನೇ ಹೇಳಿದ್ದಾರೆ. ದೊಡ್ಡವರು ಹೇಳಿದ್ದಾರೆ ಎಂದ ಮೇಲೆ ಎಲ್ಲಾ ಯೋಚಿಸಿಯೇ ಹೇಳಿರುತ್ತಾರೆ ಎಂದರು.

ಶೇಕಡಾ 25ರಷ್ಟು ಮಂದಿ ಥಿಯೇಟರ್ ಗೆ ಬಂದರೂ ಸಾಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾವ ನಟನೂ ನಿರ್ಮಾಪಕರಿಗೆ ನಷ್ಟ ಆಗಲಿ ಅಂತ ಬಯಸೋಲ್ಲ. ದರ್ಶನ್ ತೊಂದರೆ ಮಾಡಿದರು ಅಂತ ಯಾವ ನಿರ್ಮಾಪಕರು ದೂರು ಕೊಟ್ಟಿಲ್ಲ. ಸಿನಿಮಾಗಳ ಥಿಯೇಟರ್ ನಲ್ಲಿ ರಿಲೀಸ್ ಆಗುವುದರಿಂದ ಯಾವುದೇ ನಷ್ಟ ಆಗಲ್ಲ. ಸಿನಿಮಾ ರಿಲೀಸ್ ಬಗ್ಗೆ ಥಿಯೇಟರ್‌ಗೆ ಜೈ ಎಂದರು. ನಟ ಅಭಿಷೇಕ್.