ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ: ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರ.

ಬೆಂಗಳೂರು,ಜನವರಿ,21,2022(www.justkannada.in):  ಕೊರೋನಾ ನಿರ್ವಹಣೆ, ಹೊಸ ಕೋವಿಡ್ ನಿಯಮ ಜಾರಿ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 1 ಗಂಟೆಗೆ ಸಭೆ ನಡೆಯಲಿದ್ದು ಕೊರೋನಾ ನಿಯಂತ್ರಣ ಸಂಬಂಧ ಸಚಿವರು ಅಧಿಕಾರಿಗಳು , ತಜ್ಞರ ಜತೆ ಸಿಎಂ ಬಸವರಾಜ ಬೊಮ್ಮಾಯಿ ಕೊರೋನಾ ನಿಯಂತ್ರಣ ಸಂಬಂಧ ಚರ್ಚೆ ನಡೆಸಲಿದ್ದಾರೆ. ಇಂದೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಬಗ್ಗೆ ನಿರ್ಧಾರವಾಗಲಿದ್ದು ಮಧ್ಯಾಹ್ನದ ವೇಳೆಗೆ ಹೊಸ ಕೋವಿಡ್ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ.

 ಈ ಮಧ್ಯೆ ಕರ್ಫ್ಯೂಗೆ ಬಾರಿ ವಿರೋಧ ವ್ಯಕ್ತವಾದ ಹಿನ್ನಲೆ ಕರ್ಫ್ಯೂ ತೆಗೆಯುವ ಸಾಧ್ಯತೆ ಇದೆ. ಕರ್ಫ್ಯೂ ವಾಪಸ್ಸ್ ತೆಗೆದುಕೊಂಡ್ರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಜಿಲ್ಲೆಯ ಪರಿಸ್ಥಿತಿ ಆಧರಿಸಿ ಆಯಾ ಜಿಲ್ಲಾಧಿಕಾರಿಗಳಿಗೆ ನಿಯಮ ರೂಪಿಸಲು ಅಧಿಕಾರ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಮೇಲೆ ಎಲ್ಲರ ಚಿತ್ತವಿದೆ.

 

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕೊರೋನಾ ನಿಯಂತ್ರಣ ಸಂಬಂಧ ಮಧ್ಯಾಹ್ನ ಸಭೆ ಇದೆ. ವಿಕೇಂಡ್ ಕರ್ಫ್ಯೂ ಬಗ್ಗೆ ಕೇಂದ್ರ ಸಚಿವರು, ಉದ್ಯಮಿಗಳು ವಿವಿಧ ವಲಯದವರು ಸಲಹೆ ನೀಡಿದ್ದಾರೆ.  ಕೋವಿಡ್ ಸ್ಥಿತಿ ಗತಿ ಆದರಿಸಿ ಎಲ್ಲದರ ಬಗ್ಗೆ  ಇಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

Key words: Meeting-CM- today- Night Curfew-Weekend Curfew.