ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕಾದಂಬರಿ ಆಹ್ವಾನ.

ಮೈಸೂರು,ಫೆಬ್ರವರಿ,5,2024(www.justkannada.in): ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು  ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ  ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022 ರಲ್ಲಿ ಸ್ಥಾಪಿಸಿರುವ  ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ -2024’ ಗೆ ಮಹಿಳೆಯರು ಪ್ರಕಟಿಸಿದ ಕಾದಂಬರಿಗಳನ್ನು  ಆಹ್ವಾನಿಸಿದೆ.

2020 -2023ರ ಅವಧಿಯಲ್ಲಿ ಮೊದಲ ಮುದ್ರಣ ಕಂಡಿರುವ ಕೃತಿಗಳನ್ನು ಮಾತ್ರ ಪರಿಗಣಿಸಲಾಗುವುದು. ಪ್ರಶಸ್ತಿ 25,000 ರೂ. ನಗದು ಮತ್ತು ಫಲಕವನ್ನು ಒಳಗೊಂಡಿದ್ದು, ಜೂನ್  2 ರಂದು ಮೈಸೂರಿನಲ್ಲಿ ಪ್ರದಾನ ಮಾಡಲಾಗುವುದು. ಆಸಕ್ತ ಪ್ರಕಾಶಕರು ಅಥವಾ ಲೇಖಕಿಯರು ಕಾದಂಬರಿಯ ನಾಲ್ಕು ಪ್ರತಿಗಳನ್ನು ಮಾರ್ಚ್ 15 ರೊಳಗೆ  ಕಳುಹಿಸಿ ಕೊಡುವಂತೆ‌ ಕೋರಲಾಗಿದೆ.

ವಿಳಾಸ: ವಿಜಯಾ ರಾವ್, ಮನೆ ನಂಬರ್ 861, 14ನೇ ಮೇನ್, ವಿಜಯನಗರ ಮೊದಲನೆ ಹಂತ, ಮೈಸೂರು. ಪಿನ್: 570017. ಮೊಬೈಲ್: 9845422855.

Key words: Novel- invitation – writer – Vijaya Dabbe Literary Award