Monday, September 21, 2026

BDA Apartments

ನಾವು ಯಾವ ಒತ್ತಡಕ್ಕೂ ಮಣಿಯಲ್ಲ: ತಪ್ಪು ಮಾಡಿದ್ರೆ ಕ್ರಮ- ಗೃಹ ಸಚಿವ ಬಸವರಾಜ ಬೊ...
Home Front Page ನಾವು ಯಾವ ಒತ್ತಡಕ್ಕೂ ಮಣಿಯಲ್ಲ: ತಪ್ಪು ಮಾಡಿದ್ರೆ ಕ್ರಮ- ಗೃಹ ಸಚಿವ ಬಸವರಾಜ ಬೊಮ್ಮಾಯಿ….

ನಾವು ಯಾವ ಒತ್ತಡಕ್ಕೂ ಮಣಿಯಲ್ಲ: ತಪ್ಪು ಮಾಡಿದ್ರೆ ಕ್ರಮ- ಗೃಹ ಸಚಿವ ಬಸವರಾಜ ಬೊಮ್ಮಾಯಿ….

ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ನಾವು ಯಾವ ಒತ್ತಡಕ್ಕೂ ಮಣಿಯಲ್ಲ. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.jk-logo-justkannada-logo

ಡ್ರಗ್ಸ್ ದಂಧೆ ಕುರಿತು ಮಾಧ್ಯಮದ ಜತೆ ಇಂದು ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯೋಗೀಶ್ ಭಟ್ ವರದಿ ಪರಿಶೀಲಿಸಲು ಎಸಿಎಸ್ ಗೆ ಸೂಚಿಸಿದ್ದೇನೆ. ವರದಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಪರಿಶೀಲನೆಗೆ ಸೂಚಿಸಿದ್ದೇನೆ.  ಡ್ರಗ್ಸ್ ದಂಧೆಯನ್ನ ವೈಜ್ಞಾನಿಕವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಡ್ರಗ್ಸ್ ದಂಧೆ ತನಿಖೆ ವಿಚಾರದಲ್ಲಿ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಯಾವುದೇ ವಲಯ, ವ್ಯಕ್ತಿ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ತಿಳಿಸಿದರು.home minister-Basavaraja bommai-drugs-sandalwood

ಹೊರ ರಾಜ್ಯಗಳಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹೊರದೇಶಗಳಿಂದಲೂ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹೀಗಾಗಿ ಡ್ರಗ್ಸ್ ಪೂರೈಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: home minister-Basavaraja bommai-drugs-sandalwood