ಇನ್ನಾದರೂ ಶಿಕ್ಷಕರ ಸಮಸ್ಯೆ ಪರಿಹರಿಸಿ- ಸರ್ಕಾರಕ್ಕೆ ಮಾಜಿ ಸಚಿವ ಯು.ಟಿ ಖಾದರ್ ಒತ್ತಾಯ….

ಮಂಗಳೂರು,ಸೆಪ್ಟಂಬರ್,3,2020(www.justkannada.in):  ಕೋವಿಡ್ ಸಂಕಷ್ಟದ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಕರನ್ನ ಕಡೆಗಣಿಸಿವೆ ಎಂದು ಮಾಜಿ ಸಚಿವ ಯುಟಿ ಖಾದರ್ ಆರೋಪಿಸಿದ್ದಾರೆ.jk-logo-justkannada-logo

ಮಂಗಳೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್,   ದೇಶದಲ್ಲಿ ಕೊರೋನಾ ಹಾವಳಿ ಅಟ್ಟಹಾಸ ಮೆರೆಯುತ್ತಿದ್ದು ಕೊವೀಡ್ ನಿಂದಾಗಿ ಶಿಕ್ಷಕರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಶಿಕ್ಷಕರು ಕೃಷಿ, ವ್ಯಾಪಾರ, ಕೂಲಿ ಮಾಡುವಂತಾಗಿದೆ. ಹೀಗಾಗಿ ಸರ್ಕಾರ ಇನ್ನಾದರೂ ಶಿಕ್ಷಕರ ಸಮಸ್ಯೆ ಕಡೆಗೆ ಗಮನ ಹರಿಸಿ ಶಿಕ್ಷಕರ ಸಮಸ್ಯೆ ಪರಿಹರಿಸಲಿ ಎಂದು ಆಗ್ರಹಿಸಿದರು.solve-teachers-problem-former-minister-ut-khader-govrnament

Key words: Solve –teachers- problem-Former minister- UT Khader -govrnament