Wednesday, September 16, 2026

BDA Apartments

ದೇಶದಲ್ಲಿ ಇಳಿಕೆಯತ್ತ ಕೋರೋನಾ : ಹೊಸದಾಗಿ 11,903 ಕೋವಿಡ್ ಕೇಸ್ ಗಳು ಪತ್ತೆ BDA JK_Adv BDA Adv
Home Front Page ದೇಶದಲ್ಲಿ ಇಳಿಕೆಯತ್ತ ಕೋರೋನಾ : ಹೊಸದಾಗಿ 11,903 ಕೋವಿಡ್ ಕೇಸ್ ಗಳು ಪತ್ತೆ

ದೇಶದಲ್ಲಿ ಇಳಿಕೆಯತ್ತ ಕೋರೋನಾ : ಹೊಸದಾಗಿ 11,903 ಕೋವಿಡ್ ಕೇಸ್ ಗಳು ಪತ್ತೆ

ನವದೆಹಲಿ,ನವೆಂಬರ್,3,2021(www.justkannada.in):  ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣ ಇಳಿಕೆಯಾಗುತ್ತಿದ್ದು, ಈ ನಡುವೆ ಕಳೆದ 24 ಗಂಟೆಗಳಲ್ಲಿ 11,903 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು,   ಕಳೆದ 24 ಗಂಟೆ ಅವಧಿಯಲ್ಲಿ 11,903 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 311 ಮಂದಿ ಕೊರೊನಾದಿಂಧ ಮೃತಪಟ್ಟಿದ್ದಾರೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,43,08,140ಕ್ಕೆ ಏರಿಕೆಯಾಗಿದ್ದು,  ಸಾವಿನ ಸಂಖ್ಯೆ 4,59,191ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,51,209ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 14,159 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೆ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,36,97,740ಕ್ಕೆ ತಲುಪಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ  1,07,29,66,315 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

Key words: Corona – decline – country- 11,903 -new covid -case -detected