ನ.16 ರಂದು ಬೆಂಗಳೂರಿನಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ.

ಬೆಂಗಳೂರು,ನವೆಂಬರ್ 3,2021(www.justkannada.in):  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಹೃದಯಾಘಾತದಿಂದ ನಿಧನರಾಗಿ 6 ದಿನ ಕಳೆದಿದ್ದು ಅವರಿಗೆ ನಮನ ಸಲ್ಲಿಸುವ ಸಲುವಾಗಿ ನವೆಂಬರ್ 16 ರಂದು `ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸ್ಯಾಂಡಲ್ ವುಡ್ ವತಿಯಿಂದ  ನವೆಂಬರ್ 16 ರಂದು 3 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ  ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು, ಅಂದು ಸ್ಯಾಂಡಲ್ ವುಡ್ ನಟರು, ಕಲಾವಿದರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಟ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ನಿನ್ನೆ ಪುನೀತ್ ರಾಜ್ ಕುಮಾರ್ ಅವರ ಹಾಲುತುಪ್ಪ ಕಾರ್ಯ ನೆರವೇರಿತು. ಇಂದಿನಿಂದ  ಪುನೀತ್ ರಾಜ್ ಕುಮಾರ್ ಅವರ ಸಮಾಧಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಅಪ್ಪು ಅಭಿಮಾನಿಗಳು ಸರತಿ ಸಾಲಿನಲ್ಲಿ ಬಂದು ನಮನ ಸಲ್ಲಿಸುತ್ತಿದ್ದಾರೆ.

Key words:  Actor -Punith ‘Namana’ -Bangalore – November 16

ENGLISH SUMMARY…

‘Puneeth Namana’ program in Bengaluru on Nov. 16
Bengaluru, November 3, 2021 (www.justkannada.in): Already six days have passed following the death of Powerstar Puneeth Rajkumar. A program titled ‘Puneeth Namana’ has been organized on November 16, in Bengaluru to pay tributes to the late actor.
The Sandalwood industry has organized the program which will be held at the Palace grounds on November 16, from 3.00 pm. Sandalwood stars, artists, and dignitaries will pay their tributes to the late actor in the program.
Keywords: Puneeth Namana/ tribute/ Puneeth Rajkumar/ November 16