ಆಕಸ್ಮಿಕವಾಗಿ ಕಾಂಗ್ರೆಸ್ ಗೆದ್ಧಿದೆ: ಮತದಾರರು ಕಾಂಗ್ರೆಸ್ ಗೆ ಜೀವ ನೀಡಿದ್ದಾರೆ- ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ನವೆಂಬರ್,3,2021(www.justkannada.in):  ಸಿಎಂ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಒಪ್ಪಿಕೊಳ್ಳುತ್ತೇವೆ. ಕಾಂಗ್ರೆಸ್ ಆಕಸ್ಮಿಕವಾಗಿ ಗೆದ್ದಿದೆ. ಮತದಾರರು ಕಾಂಗ್ರೆಸ್ ಗೆ ಜೀವ ನೀಡಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿಲ್ವಾ..? ಪಟೇಲ್ ಅವರು ಸಿಎಂ ಆಗಿದ್ದಾಗ ಚೆನ್ನಗಿರಿಯಲ್ಲಿ ಸೋಲಲಿಲ್ವಾ…? ಇದಕ್ಕೆ ಕಾಂಗ್ರೆಸ್ ನವರು ಏನು ಹೇಳ್ತಾರೆ. ಒಂದು ಸೋಲಿನಿಂದ ಎಲ್ಲವನ್ನೂ ನಿರ್ಧಾರ ಮಾಡಲು ಆಗುವುದಿಲ್ಲ ಎಂದು ನುಡಿದರು.

ಪ್ರಾದೇಶಿಕ ಪಕ್ಷಕ್ಕೆ ಯಾವುದೇ ಸ್ಥಾನ ಇಲ್ಲ ಎಂಬುದು ಸಾಬೀತು. ಎರಡು ಉಪಚುನಾವಣೆಯಲ್ಲಿ  ಸಾಬೀತಾಗಿದೆ.  ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿ ಇಳಿಯುತ್ತಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದರು.

Key words:  by-election-Congress -won -by accident- Minister- KS Eshwarappa.