Thursday, August 6, 2026

BDA Apartments

Home Cinema ನಾಳೆ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ.

ನಾಳೆ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ: ಇಂದು ಇಡೀ ದಿನ ಅಂತಿಮ ದರ್ಶನಕ್ಕೆ ಅವಕಾಶ.

ಬೆಂಗಳೂರು,ಅಕ್ಟೋಬರ್,30,2021(www.justkannada.in):  ಹೃದಯಾಘಾತದಿಂದ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು ಸಂಜೆಯೇ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಅಂತ್ಯಕ್ರಿಯೆಯನ್ನ ನಾಳೆ ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಳೆ ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ನಡೆಯಲಿದೆ. ನಟ ಪುನೀತ್ ಅವರ ಪುತ್ರಿ ಇಂದು ಸಂಜೆ 5 ಗಂಟೆ ವೇಳೆಗೆ ಬೆಂಗಳೂರುಗೆ ಆಗಮಿಸಲಿದ್ದಾರೆ. ಇನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ಹೀಗಾಗಿ ನಟ ಶಿವಣ್ಣ ಮತ್ತು ಕುಟುಂಬಸ್ಥರ ಜತೆ ಚರ್ಚಿಸಿ ನಾಳೆ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ನಾಳೆವರೆಗೂ ಅಂತಿಮ ದರ್ಶನಕ್ಕೆ ಅವಕಾಶವಿದೆ.  ಅಭಿಮಾನಿಗಳು ಶಾಂತಿಯುತವಾಗಿ ಬಂದು ಅಂತಿಮ ದರ್ಶನ ಪಡೆಯಿರಿ ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.

Key words: Actor- Puneet Raj Kumar- funeral- tomorrow