ನಟ ಅಪ್ಪು ಅಂತಿಮ ದರ್ಶನ ಪಡೆದು ಭಾವುಕರಾದ ತೆಲಗು ನಟ ನಂದಮೂರಿ ಬಾಲಕೃಷ್ಣ.

ಬೆಂಗಳೂರು,ಅಕ್ಟೋಬರ್,30,2021(www.justkannada.in):  ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಬೇರೆ ಬೇರೆ ರಾಜ್ಯಗಳಿಂದಲೂ ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

ಈ ಮಧ್ಯೆ ತೆಲಗು ನಟ ನಂದಮೂರಿ ಬಾಲಕೃಷ್ಣ ಅವರು ಕಂಠೀರವ ಸ್ಟೇಡಿಯಂಗೆ ಆಗಮಿಸಿ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದರು. ಈ ವೇಳೆ ಮಾತನಾಡಿದ ಅವರು, ನನ್ನ ಸಹೋದರ, ಸ್ನೇಹಿತ ಇಲ್ಲವೆಂದು ನೋವಾಗುತ್ತಿದೆ.  ಒಂದೇ ತಾಯಿಯ ಮಕ್ಕಳಲ್ಲದಿದ್ದರೂ ಸೋದರರಂತಿದ್ದವು.

ಅಪ್ಪು ನಟನೆ ಜತೆ ಸಮಾಜಸೇವೆಯನ್ನೂ ಮಾಡಿದ್ದರು. ಕಣ್ಣು ಕೂಡ ದಾನ ಮಾಡಿದ್ದಾರೆ.   ನಾನು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅವರು ಬರುತ್ತಿದ್ದರು. ಪುನೀತ್ ಕಲಾವಿದರಾಗಿ ಅಭಿಮಾನಿಗಳನ್ನ ರಂಜಿಸುತ್ತಿದ್ದರು. ನಟ ಶಿವಣ್ಣ ಮತ್ತು ಪುನೀತ್ ಲೇಪಾಕ್ಷಿಗೆ ಬಂದಿದ್ದರು. ಅಪ್ಪು ನಮ್ಮ ಮುಂದೆ ಇಲ್ಲದೇ ಇರಬಹುದು. ಆದರೆ ಅವರು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತಾರೆ ಎಂದು ನುಡಿದರು.

Key words: Telugu actor -Nandamuri Balakrishna -gets – final – actor –punith rajkumar