ಭಟ್ಟರ ಹೊಸ ಸಿನಿಮಾ ಬಂದ ಶಾಮನೂರು ‘ಮಾಡೆಲ್’ !

ಬೆಂಗಳೂರು, ನವೆಂಬರ್ 2, 2019 (www.justkannada.in): ಯೋಗರಾಜ್ ಭಟ್ ‘ಗಾಳಿಪಟ 2’ ನಡುವೆ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಯೋಗರಾಜ್ ಮೂವಿಸ್ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಪೃಥ್ವಿ ಶಾಮನೂರು ನಾಯಕನಾಗಿ ನಟಿಸುತ್ತಿದ್ದಾರೆ. ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಪೃಥ್ವಿ ಈಗ ಹೀರೋ ಆಗುತ್ತಿದ್ದಾರೆ.

ಈ ಸಿನಿಮಾದ ನಿರ್ಮಾಣದಲ್ಲಿ ಅವರ ತಂದೆ ರವಿ ಶಾಮನೂರು ಕೂಡ ಕೈ ಜೋಡಿಸಿದ್ದಾರೆ. ಸಿನಿಮಾದ ಟೈಟಲ್ ‘ಪದವಿ ಪೂರ್ವ’ ಎಂದು ಇಡಲಾಗಿದೆ. ಯುವಕ ಯುವತಿಯರ ತಲ್ಲಣವನ್ನು ಇಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದೆ.