ರಿಷಭ್ ಶೆಟ್ಟಿ ‘ಕಥಾ ಸಂಗಮ’ U/A ಸರ್ಟೀಫಿಕೇಟ್: ಡಿ.6ರಂದು ತೆರೆಗೆ

ಬೆಂಗಳೂರು, ನವೆಂಬರ್ 2, 2019 (www.justkannada.in): ರಿಷಭ್ ಶೆಟ್ಟಿ ನಿರ್ಮಾಣದ ಕಥಾ ಸಂಗಮ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ.

ಸಿನಿಮಾ ಡಿಸೆಂಬರ್ 6 ರಂದು ತೆರೆಗೆ ಬರಲಿದೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಯೂ ಪ್ರಮಾಣ ಪತ್ರ ಸಿಕ್ಕಿದೆ.

ಚಿತ್ರದ ಬಿಡುಗಡೆ ದಿನಾಂಕವೂ ಹೊರ ಬಂದಿದೆ. ವರ್ಷಾಂತ್ಯದಲ್ಲಿ ತಮ್ಮ ಕಥೆಯನ್ನು ರಿಭಷ್ ಶೆಟ್ಟಿ ಮತ್ತು ತಂಡ ಹೇಳುತ್ತಿದೆ. ಕಥಾ ಸಂಗಮದಲ್ಲಿ ಏಳು ಕಥೆಗಳು ಸಂಗಮ ಆಗಿದೆ.

ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಸಿನಿಮಾಟೋಗ್ರಾಫರ್ ಗಳು ಕೆಲಸ ಮಾಡಿದ್ದಾರೆ. ರಿಷಭ್ ಶೆಟ್ಟಿ ಹಾಗೂ ಪ್ರಕಾಶ್ ಹೆಚ್ ಕೆ ಹಾಗೂ ಪ್ರದೀಪ್ ಎನ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.