ಶಿವರಾಮ್ ಹೆಬ್ಬಾರ್ ರನ್ನ ಮತ್ತೆ ವಿಧಾನಸಭೆಗೆ ಕಳುಹಿಸಬೇಡಿ- ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ…

ಉತ್ತರ ಕನ್ನಡ,ನ,25,2019(www.justkannada.in): ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಜನತೆಗೆ ಮೋಸಮಾಡಿದ್ದಾರೆ. ಹೀಗಾಗಿ ಅವರನ್ನ ಮತ್ತೊಮ್ಮೆ ವಿಧಾನಸಭೆಗೆ ಕಳುಹಿಸಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಇಂದೂರಿನಲ್ಲಿ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಕುರಿ ಕೋಳಿಗಳಂತೆ ಶಾಸಕರು ಖರೀದಿಯಾಗುತ್ತಿದ್ದಾರೆ. ಶಿವರಾಮ್ ಹೆಬ್ಬಾರ್ ಎಷ್ಟುಕ್ಕೆ ವ್ಯಾಪಾರ ಆಗಿದ್ದಾನೋ ಗೊತ್ತಿಲ್ಲ ಶಿವರಾಂ ಹೆಬ್ಬಾರ್ ರನ್ನ ಮತ್ತೆ ಗೆಲ್ಲಿಸಬೇಡಿ ಎಂದು ಮನವಿ ಮಾಡಿದರು.

ನೆರೆ ಬಂದಾಗ ಸಿಎಂ ಬಿಎಸ್ ಯಡಿಯೂರಪ್ಪ ಬರಲಿಲ್ಲ. ಆದ್ರೆ ಈಗ ಮತ ಕೇಳಲು ಬರುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ನಾವು ಈಗಾಗಲೇ ಗೆದ್ದಿದ್ದೇವೆ ಎಂದು ಹೇಳುತ್ತಾರೆ. ಹಾಗಾದ್ರೆ ಪ್ರಚಾರಕ್ಕೆ ಯಾಕೆ ಬರ್ತೀರಾ ಯಡಿಯೂರಪ್ಪನವರೇ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.

Key words: uttara kannada- Shivaram Hebbar –assembly-Former CM -Siddaramaiah